
ಬೆಳಗಾವಿ
ಆರ್ ಎಸ್ ಎಸ್ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳನ್ನು ಬ್ಯಾನ್ ಮಾಡುವ ಉದ್ದೇಶ ಸರಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೇ, ಸಂಸ್ಥೆ, ಸಂಘ ಹಾಗೂ ಸಂಘಟನೆಗನ್ನು ಬ್ಯಾನ್ ಮಾಡುವ ಚಿಂತನೆ ಸರಕಾರದ ಮುಂದೆ ಇಲ್ಲ ಎಂದರು.
ನವೆಂಬರ್ ಒಂದು ಭುವನೇಶ್ವರಿ ತಾಯಿಯ ಗೌರವಿಸಿಸುತ್ತ. ಕರ್ನಾಟಕ ಏಕೀಕರಣವಾಗಿರುವುನ್ನು ಆಚರಣೆ ಮಾಡುವುದು ಎಲ್ಲ ಕರ್ನಾಟಕದವರ ಕರ್ತವ್ಯ ಎಲ್ಲರೂ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಹಕರಿಸಬೇಕು. ಎಂಇಎಸ್ ಕರಾಳ ದಿನಾಚಾರಣೆ ಮಾಡಿದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದರು.
ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಮಾಡುವುದು ರೂಡಿಯಾಗಿದೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ. ಸಿದ್ಧತೆ ನಡೆಸಲಾಗುತ್ತಿದೆ ಎಂದರು
