Friday, November 20, 2026
HomeBelagaviರಾಣಿ ಶುಗರ್ಸ್ ಘಟನೆಯ ಹಿಂದೆ ವ್ಯವಸ್ಥಿತ ಸಂಚು: ಚನ್ನರಾಜ ವಿರುದ್ಧ ರೈತರ‌ ಗಂಭೀರ ಆರೋಪ

ರಾಣಿ ಶುಗರ್ಸ್ ಘಟನೆಯ ಹಿಂದೆ ವ್ಯವಸ್ಥಿತ ಸಂಚು: ಚನ್ನರಾಜ ವಿರುದ್ಧ ರೈತರ‌ ಗಂಭೀರ ಆರೋಪ

 

ಬೆಳಗಾವಿ
ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನಾಲ್ಕು ಲಕ್ಷ ಕಬ್ಬು‌ ನುರಿಸುವ ಗುರಿ ಇಟ್ಟುಕೊಂಡಿರುವ ಚನ್ನರಾಜ ಹಟ್ಟಿಹೊಳಿ ಅವರು ಕಡಿಮೆ ನುರಿಸಿದರೆ ತಮ್ಮ ಸ್ವಂತ ಖರ್ಚಿನಲ್ಲಿ ಭರಿಸಿಕೊಡಬೇಕು ಇಲ್ಲದಿದ್ದರೇ ಸಹಕಾರಿ ರಂಗವನ್ನು ಮುಚ್ಚುವ ಉದ್ದೇಶದಿಂದ ಅಧ್ಯಕ್ಷರಾಗಿದ್ದಾರೆ ಎಂದು ರೈತ ಮುಖಂಡ ಪ್ರಕಾಶ ನಾಯಕ ಕಿಡಿಕಾರಿದರು.
ಶುಕ್ರವಾರ ಬೆಳಗಾವಿಯಲ್ಲಿ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಆರಂಭವಾದ ಕೆಲವೇ ದಿನಗಳಲ್ಲಿ ಕಾರ್ಖಾನೆಯ ಟರ್ಬೈನ್ ಬ್ಲಾಸ್ಟ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಗೆ ನಿಖರ ಕಾರಣವೇನು, ಕಾರ್ಖಾನೆಗೆ ಎಷ್ಟು ನಷ್ಟವಾಗಿದೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದಕ್ಕೆ ಆಡಳಿತ ಮಂಡಳಿ ಉತ್ತರಿಸಬೇಕು ಎಂದರು.
ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಕಳೆದೊಂದು ವಾರದ ಹಿಂದೆ ಕಬ್ಬು ನುರಿಸುವ ಹಂಗಾಮಿ ಚಾಲನೆ ಮಾಡಿದ್ದಾರೆ. ಇತ್ತೀಚೆಗೆ ಟರ್ಬೈನ್ ಬಾಸ್ಟ್ ಆಗಿ ಕಬ್ಬಿನ ನುರಿತ ಸಂಪೂರ್ಣ ಬಂದು ಬಿದಿದ್ದೆ. ಇದರಿಂದ ಹರ್ಷಾ, ಮೃಣಾಲ್‌ ಹಾಗೂ ಲೈಲಾ ಶುಗರ್ಸ್ ಗೆ ಬಾಕಿ ಕಬ್ಬನ್ನು ನುರಿಸಲು ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಸಿದಗೌಡ ಮೋದಗಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಹಾಗೂ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಚನ್ನರಾಜ ಹಟ್ಟಿಹೊಳಿ ಕಾರ್ಖಾನೆಯಲ್ಲಿ ಜರ್ಮನ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಮಲಪ್ರಭಾ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುತ್ತಾರೆ. ರೈತರ ಹಿತ ಕಾಯುತ್ತಾರೆ ಎಂದು ಚನ್ನರಾಜ ಹಟ್ಟಿಹೊಳಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಮೃಣಾಲ್‌ ಸಕ್ಕರೆ ಕಾರ್ಖಾನೆಗೆ ವ್ಯವಸ್ಥೆಗೆ ಕಳುಹಿಸಲು ಟರ್ಬೈನ್ ಬಾಸ್ಟ್ ಮಾಡಿಸಿರ ಬಹುದು. ಇದಕ್ಕೆ ನೇರವಾಗಿ ಚನ್ನರಾಜ ಹಟ್ಟಿಹೊಳಿ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.
ಬಸನಗೌಡ ಪಾಟೀಲ್ ಮಾತನಾಡಿ, ಪ್ರತಿ ವರ್ಷ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಹಾಗೂ ಮಷೀನರ್ ದುರಸ್ತಿ ಮಾಡುವರಿಗೆ ನೀಡುವ ಬದಲು ಬೇರೆಯವರಿಗೆ ದುರಸ್ತಿ ಮಾಡಲು ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಇಲ್ಲಿನ ಕಾರ್ಖಾನೆಯ ಟರ್ಬೈನ್ ಬಾಸ್ಟ್ ಮಾಡಿಸಿ ಮೃಣಾಲ್ ಹಾಗೂ ಹರ್ಷಾ ಶುಗರ್ಸ್ ಗೆ ಕಳುಹಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ಖಾನೆ ಆರಂಭವಾದಾಗಿನಿಂದ ಸ್ಥಳೀಯ ಕಬ್ಬು ಕಟಾವು ಗ್ಯಾಂಗ್‌ಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗಿನ ಆಡಳಿತ ಮಂಡಳಿ ಸ್ಥಳೀಯ ಗ್ಯಾಂಗ್‌ಗಳನ್ನು ಕಡೆಗಣಿಸಿ ಮಹಾರಾಷ್ಟ್ರ ಸೇರಿದಂತೆ ದೂರದ ಪ್ರದೇಶಗಳಿಂದ ಗ್ಯಾಂಗ್‌ಗಳನ್ನು ಕರೆಸಿಕೊಳ್ಳಲು ಸುಮಾರು 16 ಕೋಟಿ ರೂ. ಮುಂಗಡ ಹಣ ನೀಡಿದೆ. ಇದರಿಂದ ಸ್ಥಳೀಯ ಯುವಕರಿಗೆ ಅನ್ಯಾಯವಾಗಿದ್ದು, ಸ್ಥಳೀಯ ಗ್ಯಾಂಗ್‌ಗಳಿಗೆ ಮತ್ತೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು‌.
ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಕಳೆದ ಮೂರು ವರ್ಷಗಳಿಂದ ಆಡಿಟ್ ಪೂರ್ಣಗೊಂಡಿದೆ ಎಂದು ವಿವಿಧ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದಾಗ ಆಡಿಟ್ ಇನ್ನೂ ಆಗಿಲ್ಲ ಎಂಬ ಮಾಹಿತಿ ದೊರೆಯುತ್ತಿದೆ. ಆಡಿಟ್ ಆಗಿದ್ದರೆ ಅದರ ಅಧಿಕೃತ ಪ್ರತಿಯನ್ನು ಸದಸ್ಯರಿಗೆ ನೀಡಬೇಕು. ಇಲ್ಲದಿದ್ದರೆ ಕೂಡಲೇ ಆಡಿಟ್ ಮಾಡಿಸಬೇಕು. ಸುಳ್ಳು ಮಾಹಿತಿ ನೀಡಿ ರೈತರು ಹಾಗೂ ಷೇರುದಾರರನ್ನು ದಾರಿ ತಪ್ಪಿಸಬಾರದು ಎಂದು ಹರಿಹಾಯ್ದರು.

Total Views 79
RELATED ARTICLES

Most Popular

Recent Comments

KNN City News
Home
E-Paper