Saturday, November 21, 2026
HomeBelagaviವಾಲ್ಮೀಕಿ ಸಮಾಜಕ್ಕೆ ಅಪಮಾನ ಮಾಡಿದ ಕತ್ತಿ ಬಂಧನಕ್ಕೆ ಒತ್ತಾಯ

ವಾಲ್ಮೀಕಿ ಸಮಾಜಕ್ಕೆ ಅಪಮಾನ ಮಾಡಿದ ಕತ್ತಿ ಬಂಧನಕ್ಕೆ ಒತ್ತಾಯ

ಕನ್ನಡಮ್ಮ ಸುದ್ದಿ ಹಾರೂಗೇರಿ
ರಾಮಾಯಣದಂತಹ ಮಹಾಕಾವ್ಯ ರಚಿಸಿದ ವಾಲ್ಮೀಕಿ ಸಮಾಜಕ್ಕೆ ಡಿಸಿಸಿ ಬ್ಯಾಂಕ ಚುನಾವಣೆಯ ಸಂದರ್ಭದಲ್ಲಿ ಚಿಕ್ಕೋಡಿಯ ಮಾಜಿ ಸಂಸದ ರಮೇಶ ಕತ್ತಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಆದ್ದರಿಂದ ಇವರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿ ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಗಸ್ತಿಯವರು ಎಚ್ಚರಿಕೆ ನೀಡಿದರು.

ಹಾರೂಗೇರಿ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿರುವ ಅಂಬೇಡ್ಕರರವರ ಪ್ರತಿಮೆಗೆ ಪೂಜೆ ಸಲ್ಲಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರತಿಭಟಿಸಿದ ಪ್ರತಿಭಟನಾಕಾರರು.

ನಮ್ಮ ನಾಲಿಗೆ ನಮ್ಮ ಅಂತರಂಗವನ್ನು ತಿಳಿಸುವಂತೆ ನಿಮ್ಮ ಹೊಲಸು ಮನಸ್ಸಿನಿಂದ ಒಂದು ಜಾತಿಯನ್ನ ನಿಂದಿಸುತ್ತೀರಿ ನಿಮ್ಮ ದುರಹಂಕಾರಕ್ಕೆ ಒಂದು ದಿನ ಕಡಿವಾಣ ಹಾಕುವುದು ಶತಸಿದ್ಧ ಆದ್ದರಿಂದ ಆರ್ಥಿಕ, ರಾಜಕೀಯವಾಗಿ ಶ್ರೀಮಂತರಿದ್ದರೆ ಸಾಲದು ಜ್ಞಾನದಿಂದ ಪ್ರಬುದ್ಧತೆ ಬಂದರೆ ಮಾತ್ರ ಶ್ರೀಮಂತರು ಇನ್ನೊಬ್ಬರಿಗೆ ಮಾದರಿಯಾಗಬೇಕಾದ ನಿಮ್ಮ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದು ದಲಿತ ಮುಖಂಡ ಸುರೇಶ ಐಹೊಳೆ ಹೇಳಿದರು.

ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಮೇಶ ಕತ್ತಿಯವರ ಪ್ರತಿಕೃತಿ ಹಿಡಿದು ರಮೇಶ ಕತ್ತಿಯವರಿಗೆ ಧಿಕ್ಕಾರ ಹೋಗುತ್ತಾ ಪಾದಯಾತ್ರೆ ಮೂಲಕ ಸಾಗಿ ಮಾನವ ಸರಪಳಿ ನಿರ್ಮಿಸಿದರು.

ವಾಲ್ಮೀಕಿ ಸಮಾಜ ಮತ್ತು ದಲಿತ ಪರ ಸಂಘಟನೆಯ ಪ್ರತಿಭಟನಾಕಾರರು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಮತ್ತು ರಾಯಬಾಗ ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಸಮಾಜ ವಿರೋಧಿ ರಮೇಶ ಕತ್ತಿಗೆ ಧಿಕ್ಕಾರ ಕೂಗಿ ಸಿಪಿಐ ಜೀರಿಗ್ಯಾಳಗೆ ಮನವಿ ಸಲ್ಲಿಸಿ ರಮೇಶ ಕತ್ತಿಯವರ ಪ್ರತಿಕೃತಿ ದಹಿಸಿದರು. ರಸ್ತೆ ತಡೆದ ಪರಿಣಾಮ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಿದರು.

ಇದೇ ಸಂದರ್ಭದಲ್ಲಿ ಸಾಯನ್ನವರ, ಮಹೇಶ್ ಐಹೊಳೆ, ವಿಠ್ಠಲ ಚೌಗಲಾ, ಪ್ರಮೋದ ಗಸ್ತಿ, ರವಿ ಗಸ್ತಿ, ಮಲ್ಲಪ್ಪ ಗಸ್ತಿ, ಅಪ್ಪಾಸಾಬ ಸರಿಕರ, ಹಣಮಂತ ಮನ್ಸೂರ, ಪಿಂಟು ಕಾಂಬಳೆ, ಬುರಾನಸಾಬ ಶೇಖ ಹಾಗೂ ವಾಲ್ಮೀಕಿ ಸಮಾಜ ಮತ್ತು ದಲಿತ ಸಂಘಟನೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Total Views 20
RELATED ARTICLES

Most Popular

Recent Comments

KNN City News
Home
E-Paper