Saturday, November 21, 2026
HomeBelagaviಸತತ 36 ಗಂಟೆಗಳ ಬಳಿಕ ಮಂಜುನಾಥ್ ನಿವಾಸದ ಇಡಿ ಶೋಧ ಅಂತ್ಯ

ಸತತ 36 ಗಂಟೆಗಳ ಬಳಿಕ ಮಂಜುನಾಥ್ ನಿವಾಸದ ಇಡಿ ಶೋಧ ಅಂತ್ಯ

ಬೆಳಗಾವಿ
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಚಿವರ ಭಾವ ವೈ. ಮಂಜುನಾಥ್ ಬೆಳಗಾವಿ ನಗರದ ಟಿವಿ ಸೆಂಟರ್‌ನಲ್ಲಿರುವ ನಿವಾಸದ ಮೇಲೆ ನಡೆದಿದ್ದ ಇಡಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಮಂಜುನಾಥ್ ನಿವಾಸಕ್ಕೆ ಪ್ರವೇಶಿಸಿದ್ದ ಇಡಿ ಅಧಿಕಾರಿಗಳು ಸತತ 36 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ನಡೆಸಿದರು. ಬಳಿಕ ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿ ಅಧಿಕಾರಿಗಳ ತಂಡ ನಿವಾಸದಿಂದ ಹೊರಟಿತು.
ಈ ವೇಳೆ ವೈ. ಮಂಜುನಾಥ್ ಹಾಗೂ ಅವರ ಪತ್ನಿಯನ್ನು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪರಿಶೀಲನೆ ವೇಳೆ ದೊರೆತ ಕೆಲವು ದಾಖಲೆಗಳನ್ನು ಅಧಿಕಾರಿಗಳು ತಮ್ಮೊಂದಿಗೆ ತೆಗೆದುಕೊಂಡು ತೆರಳಿದ್ದಾರೆ.
ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಇಡಿ ಅಧಿಕಾರಿಗಳು ತೆರಳಿದ್ದಾರೆ ಎಂದು ತಿಳಿದುಬಂದಿದೆ. ಶೋಧ ಕಾರ್ಯಾಚರಣೆಯಲ್ಲಿ ಯಾವ ದಾಖಲೆಗಳು ಪತ್ತೆಯಾಗಿವೆ ಹಾಗೂ ಅವುಗಳ ಕುರಿತು ಮುಂದಿನ ಕ್ರಮವೇನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Total Views 62
RELATED ARTICLES

Most Popular

Recent Comments

KNN City News
Home
E-Paper