Thursday, November 19, 2026
HomeBelagaviರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಗೋಡು ತಿಮ್ಮಪ್ಪನವರಿಗೆ ಶ್ರೀಗಳದ್ವಯರ ನೇತೃತ್ವದಲ್ಲಿ ರುದ್ರಪ್ಪ ಲಮಾಣಿ ಅವರಿಂದ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಗೋಡು ತಿಮ್ಮಪ್ಪನವರಿಗೆ ಶ್ರೀಗಳದ್ವಯರ ನೇತೃತ್ವದಲ್ಲಿ ರುದ್ರಪ್ಪ ಲಮಾಣಿ ಅವರಿಂದ ಸನ್ಮಾನ

ಸಾಗರ
ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ನೀಡಿರುವ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪನವರ ಮನೆಗೆ ಆಗಮಿಸಿ ಬೇಬಿಮಠ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ, ವಿಜಾಪುರ ಮಾಜಿ ಶಾಸಕ ಮನೋಹರ ಐನಾಪುರ ಆಗಮಿಸಿ ಕಾಗೋಡು ತಿಮ್ಮಪ್ಪ ಅವರನ್ನು ಸತ್ಮಾನಿಸಿ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕಾಗೋಡು ತಿಮ್ಮಪ್ಪನವರು ಸರಳ ಸಜ್ಜನ ರಾಜಕಾರಣಿ ಹಾಗೆಯೇ ತಮ್ಮ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗವ ಕಾರ್ಯ ಮಾಡಿದ್ದಾರೆ. ಇವರಿಗೆ ಪ್ರಶಸ್ತಿ ಲಭಿಸಿರುವುದು ಅತೀವ ಸಂತೋಷ ತಂದಿದೆ ಎಂದರು.
ಹುಕ್ಕೇರಿ ಹಿರೇಮಠ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಗೋಡು ತಿಮ್ಮಪ್ಪನವರನ್ನು ಎಲ್ಲರೂ ಆದರ್ಶವಾಗಿಟ್ಟುಕೊಂಡು ಇವತ್ತಿನ ರಾಜಕಾರಣಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ರುದ್ರಾಪ್ಪ ಲಮಾಣಿ ಒಬ್ಬರು ಎಂದು ಹೇಳಲು ಸಂತೋಷವಾಗುತ್ತದೆ. ಕಾಗೋಡು ತಿಮ್ಮಪ್ಪನವರಿಗೆ ಭಗವಂತ ಶತಮಾನದ ಸಂಭ್ರಮ ಆಚರಿಸುವ ಅವಕಾಶ ‌ನೀಡಲಿ ಎಂದು ಶುಭ ಹಾರೈಸಿದರು.
ಸಚಿವ ರುದ್ರಪ್ಲ ಲಮಾಣಿ ಮಾತನಾಡಿ, ಕಾಗೋಡು ತಿಮ್ಮಪ್ಪನವರು ಎಂದರೆ ನಮಗೆ ಗುರುಗಳು. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರು ನಮಗೆಲ್ಲ ಮಾದರಿ ಎಂದರು. ಬೇಬಿಮಠ ಮತ್ತು ಹುಕ್ಕೇರಿ ಹಿರೇಮಠದ ಭಕ್ತರು ಉಪಸ್ಥಿತರಿದ್ದರು.

 

Total Views 11
RELATED ARTICLES

Most Popular

Recent Comments

KNN City News
Home
E-Paper