
ಬೆಳಗಾವಿ
ಮಹಿಳೆಯ ಫೋಟೊ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ ಎನ್ನುವ ಉದ್ದೇಶದಿಂದ ಖಾಸಗಿ ಫೋಟೋಗ್ರಾಫರ್ ನ್ನು ಅಪಹರಿಸಿ ಕೊಲೆಗೆ ಯತ್ನಿಸಿ ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಂಟು ಜನರನ್ನು ಮಾಳಮಾರುತಿ ಪೊಲೀಸರು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಫೋಟೋಗ್ರಾಫರ್ನನ್ನು ಅಪಹರಿಸಿ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದ ಎಂಟು ಜನ ಆರೋಪಿಗಳು ಬೈಲಹೊಂಗಲ ತಾಲೂಕಿನ ಮುರಕಿಬಾವಿ ಗ್ರಾಮದ ಉಮೇಶ ಹೊಸೂರು ಎಂಬ ವ್ಯಕ್ತಿಯನ್ನು ಅಪಹರಣ ಮಾಡುತ್ತಾರೆ.
ಪ್ರಕರಣ ಸಂಬಂಧ ಬಸವರಾಜ್ ನರಟ್ಟಿ, ಪ್ರವೀಣ ಉಮರಾಣಿ, ವಿಕ್ಕಿ, ತಾರಾ ನರಟ್ಟಿ, ಲಕ್ಷ್ಮಿ ನರಟ್ಟಿ ಸೇರಿ ಎಂಟು ಜನರನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬಸವರಾಜ್ ನರಟ್ಟಿಗೆ ಸೇರಿದ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ12 ವರ್ಷಗಳ ಕಾಲ ಬಸವರಾಜ್ ನರಟ್ಟಿ ಸ್ಟುಡಿಯೋದಲ್ಲಿ ಕೆಲಸ ಮಾಡಿದ್ದ. ಸರಿಯಾಗಿ ಸಂಬಳ ಕೊಡ್ತಿಲ್ಲವೆಂದು ಕಳೆದ ವರ್ಷ ಕೆಲಸ ಬಿಟ್ಟು ಸ್ವಂತ ಸ್ಟುಡಿಯೋ ತೆರೆದಿದ್ದ ಉಮೇಶ ಮದುವೆ, ಗೃಹ ಪ್ರವೇಶಗಳ ಆರ್ಡರ್ ಹಿಡಿದು ವಿಡಿಯೋಗ್ರಾಫಿ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಬೆಳಗಾವಿಯ ಕೆಪಿಟಿಸಿಎಲ್ ಹಾಲ್ನಲ್ಲಿ ನಡೆಯುತ್ತಿದ್ದ ಮದುವೆ ಆರ್ಡರ್ ಹಿಡಿದಿದ್ದ ಉಮೇಶ ಕೆಪಿಟಿಸಿಎಲ್ ಹಾಲ್ಗೆ ಬಂದ ವಿಕ್ಕಿ ಎಂಬಾತ ಉಮೇಶನನ್ನು ತನ್ನ ಕಾರಿನ ಕಡೆಗೆ ಕರೆದೊಯ್ದು ಅಪಹರಣ ಮಾಡಿದ್ದಾರೆ. ವಿಕ್ಕಿ ಹಾಗೂ ಆತನ ಇಬ್ಬರ ಸ್ನೇಹಿತರಿಂದ ಕಾರಿನಲ್ಲೇ ಉಮೇಶ ಮೇಲೆ ಹಲ್ಲೆ ಮಾಡಿ ಚಿವಟಗುಂಡಿ ಕ್ರಾಸ್ ಬಳಿ ವಾಹನ ನಿಲ್ಲಿಸಿ ಕಬ್ಬಿನ ರಾಡ್ನಿಂದ ವಿಕ್ಕಿಯಿಂದ ಉಮೇಶ ಮೇಲೆ ಹಲ್ಲೆ ಮಾಡಿ ಬಳಿಕ ಬೈಲಹೊಂಗಲದ ಬಸವರಾಜ್ ನರಟ್ಟಿ ಸಂಬಂಧಿಕರ ಮನೆಗೆ ಉಮೇಶನನ್ನು ಕರೆದೊಯ್ದ ಆರೋಪಿಗಳು ನಮ್ಮ ಮನೆಯ ಹೆಣ್ಣಮಗಳಾದ ತಾರಾ ಫೋಟೊವನ್ನು ನಿನ್ನ ಬಳಿ ಏಕೆ ಇಟ್ಟುಕೊಂಡಿರುವೆ ಎಂದು ಹಲ್ಲೆ ಮಾಡಿದ್ದಾರೆ.
ತಾರಾ ನರಟ್ಟಿ, ಬಸವರಾಜ್ ನರಟ್ಟಿ, ಲಕ್ಷ್ಮಿ ನರಟ್ಟಿಯಿಂದಲೂ ಉಮೇಶ ಮೇಲೆ ಹಲ್ಲೆ ಮಾಡಿಬಜೀವಬೆದರಿಕೆ ಹಾಕಿ ಉಮೇಶನನ್ನು ಕಳುಹಿಸಿರುವ ಆರೋಪಿಗಳು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿರುವ ಉಮೇಶ ಹಳೇ ದ್ವೇಷಕ್ಕೆ ಹಲ್ಲೆ ಮಾಡಿ, ಈಗ ಮಹಿಳೆಯ ಫೋಟೊ ಇದೆ ಎಂದು ಸುಳ್ಳು ಕಥೆ ಕಟ್ಟುತ್ತಿದ್ದಾರೆಂದು ಉಮೇಶ ಆರೋಪ ಮಾಡಿದ್ದಾರೆ.ಉಮೇಶ ನೀಡಿದ ದೂರಿನ ಆಧರಿಸಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
