Monday, November 23, 2026
HomeBelagaviಖಾನಾಪುರ ತಹಶಿಲ್ದಾರ ಪ್ರಕಾಶ ಗಾಯಕ್ವಾಡರಿಂದ ಕರ್ತವ್ಯ ಲೋಪ:ಭೀಮಪ್ಪ ಗಡಾದ

ಖಾನಾಪುರ ತಹಶಿಲ್ದಾರ ಪ್ರಕಾಶ ಗಾಯಕ್ವಾಡರಿಂದ ಕರ್ತವ್ಯ ಲೋಪ:ಭೀಮಪ್ಪ ಗಡಾದ

ಕನ್ನಡಮ್ಮ ಸುದ್ದಿ

 

ಖಾನಾಪೂರ:ತಾಲೂಕಿನ ಜಾಂಬೋಟಿಯ ಹುಳಂದ ಗ್ರಾಮಸ್ಥರಿಗೆ ಸೇರಿದ ಮೊ 508 ಎಕರೆ 20 ಗುಂಟೆ ಜಮೀನು ಸಹ ಕಬಳಿಸುವ ಅವ ಹುನ್ನಾರ ನಡೆದಿದೆ. ಈ ಜಮೀನಿನ ಪಹಣಿ ಪತ್ರದಲ್ಲಿ ಊರಿನ ಎಲ್ಲ ಜನರು ಎಂದು ದಾಖಲಾಗಿದೆ.

 

ಆದರೆ, ಇದಕ್ಕೆ ಪೂರಕವಾಗಿ ಖಾನಾಪೂರ ತಹಶೀಲ್ದಾರರು ಸರಕಾರದ ನಿಯಮ ಗಾಳಿಗೆ ತೂರಿ ಪಹಣ ಪಹಣಿ ಪತ್ರದಲ್ಲಿ ದಾಖಲಿರುವ ಊರಿನಲ್ಲಿ ಎಲ್ಲ ಜನರು ಎಂಬ ಹೆಸರು ಕಡಿಮೆ ಮಾಡಲು ಆದೇಶ ಮಾಡುವುದರ ಮೂಲಕ ಗಂಭೀರವಾದ ಕರ್ತವಲೋಪ ಎಸಗಿದ್ದಲ್ಲದೇ ಸರಕಾರಕ್ಕೆ ಮೋಸ ಮಾಡಿರುತ್ತಾರೆ ಎಂದು ಆರೋಪಿಸಿದರು.

 

ರಾಜ್ಯದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಇನ್ನಾದರೂ ಬೆಳಗಾವಿಯ ಈ ಭೂಕಬಳಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಸಬೇಕು. ಸರಕಾರಕ್ಕೆ ಸೇರಿದ ಸರಕಾರಿ ಜಮೀನು ಸರಕಾರಕ್ಕೆ ಉಳಿಯುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಗಯ್ಯ ಹಿರೇಮಠ, ಬಾಳು ಮುಗಳಕೋಡ ಇದ್ದರು.

 

ವರದಿ:ಪ್ರಸನ್ನ ಕುಂಬಾರ

 

Total Views 420
RELATED ARTICLES

Most Popular

Recent Comments

KNN City News
Home
E-Paper