ಕನ್ನಡಮ್ಮ ಸುದ್ದಿ

ಖಾನಾಪುರ: ನಿನ್ನೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಸುದ್ದಿಗೋಷ್ಠಿ ನಡೆಸಿ ಖಾನಾಪುರದ ಜಾಂಬೋಟಿ ರಿ.ಸ.ನಂ3ರ 502ಎಕರೆಯಲ್ಲಿ ಊರ ಜನರ ಹೆಸರನ್ನು ಸರಕಾರಿ ನಿಯಮ ಗಾಳಿಗೆ ತೂರಿ ಕಡಿಮೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು ಆದರೆ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ನಾನು ಕೋರ್ಟ ಆದೇಶದಂತೆ ಕೆಲಸ ಮಾಡಿದ್ದೇನೆ ಇದರಲ್ಲಿ ಯಾವುದೇ ಕರ್ತವ್ಯಲೋಪ ಎಸಗಿಲ್ಲ ಎಂದು ಸ್ಪಷ್ಟಪಡಿದ್ದಾರೆ.
27ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಭೀಮಪ್ಪ ಗಡಾದ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನಾವು ನ್ಯಾಯಾಲಯದ ಆದೇಶ ಪಾಲಿಸಿದ್ದೆವೆ. ಮಾನ್ಯ ನ್ಯಾಯಾಲಯದ ಆದೇಶದಂತೆ ಯಾವುದೇ ಮ್ಯುಟೇಶನ್ ಇಲ್ಲದೆ ತಾಲೂಕಿನ ಜಾಂಬೋಟಿ ಹುಳುಂದ ಗ್ರಾಮಕ್ಕೆ ಸೇರಿದ ರಿ.ಸ.ನಂ ನ 3ರ ಪಹಣಿಯಲ್ಲಿ ಪೋಕಳಾಗಿ ನಮೂದಾಗಿರುವುದನ್ನು ಕಾನೂನಿನ ಪ್ರಕಾರ ಕಡಿಮೆ ಮಾಡಲಾಗಿದೆ. ಇದರಲ್ಲಿ ಯಾವುದೇ ಕರ್ತವ್ಯ ಲೋಪ ಎಸಗಿರುವುದಿಲ್ಲ ಎಂದಿದ್ದಾರೆ.
