Monday, November 23, 2026
HomeBelagaviಔಷಧಿ ಉಗ್ರಾಣದ‌ ಮೇಲೆ ದಾಳಿ ನಡೆಸಿದ ಹೋದ ಲೋಕಾಯುಕ್ತ

ಔಷಧಿ ಉಗ್ರಾಣದ‌ ಮೇಲೆ ದಾಳಿ ನಡೆಸಿದ ಹೋದ ಲೋಕಾಯುಕ್ತ

 

 

ಬೆಳಗಾವಿ
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಆರ್.ಎಲ್.ಎಸ್ ಗ್ಲುಕೋಸ್ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದಲ್ಲಿ ಆರ್.ಎಲ್.ಎಸ್ ಐವಿ ಗ್ಲುಕೋಸ್ ಪತ್ತೆಯಾಗಿದ್ದು, ಬಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಔಷಧೀಯ ಉಗ್ರಾಣದ ಮೇಲೆ ಶನಿವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌‌.
ಲೋಕಾಯುಕ್ತ ದಾಳಿ ವೇಳೆ ಆರ್.ಎಲ್.ಎಸ್ ಐವಿ ಗ್ಲುಕೋಸ್ ಹತ್ತಾರು ಬಾಕ್ಸ್ ಗಳು ಪತ್ತೆಯಾಗಿವೆ. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ 8 ಜನ‌ ಅಧಿಕಾರಿಗಳಿಂದ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪಿ.ಬಿ.ಪಿ ಸಂಸ್ಥೆ‌‌ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್ ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಇಟ್ಟಿದ್ದ ಬಾಕ್ಸ್ ಕಂಡು ಶಾಕ್ ಆದ ಲೋಕಾಯುಕ್ತ ಅಧಿಕಾರಿಗಳು. ಏಪ್ರಿಲ್ ತಿಂಗಳಿಂದಲೇ ಬೆಳಗಾವಿ ಜಿಲ್ಲೆಯಾದ್ಯಂತ ಸಪ್ಲೈ ಆಗಿರುವ ಆರ್.ಎಲ್.ಎಸ್ ಐವಿ ಗ್ಲುಕೋಸ್. ಕಳೆದ ಒಂದು ಗಂಟೆಯಿಂದ ಪರಿಶೀಲನೆ ನಡೆಸುತ್ತಿರೋ ಲೋಕಾಯುಕ್ತ ಅಧಿಕಾರಿಗಳು. ಉಗ್ರಾಣದ ಅಧಿಕಾರಿಗಳಿಂದ ಎಲ್ಲೆಲ್ಲಿ ಆರ್.ಎಲ್.ಎಸ್ ಐವಿ ಗ್ಲುಕೋಸ್ ಪೂರೈಕೆ ಆಗಿರೋ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ವೇಳೆ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

Total Views 245
RELATED ARTICLES

Most Popular

Recent Comments

KNN City News
Home
E-Paper