
ಬೆಳಗಾವಿ
ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಸದನದ ಆರಂಭದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಸಚಿವ ಲಾಡ್ ಅವರು ಅಗಲಿದ ಹಲವು ರಾಜಕೀಯ ಧುರೀಣರನ್ನು ಸ್ಮರಿಸಿದರು. ಜೊತೆಗೆ ಇತ್ತೀಚೆಗೆ ನಿಧನರಾದ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ವಿಶೇಷವಾಗಿ ಸ್ಮರಿಸಿದರು.
ಉದ್ಯಮ ಕ್ಷೇತ್ರದಲ್ಲಿ ನೈತಿಕ ಮೌಲ್ಯಕ್ಕೆ ನಿಜವಾದ ಅರ್ಥ ಕೊಟ್ಟವರು ರತನ್ ಟಾಟಾ. ತಮ್ಮ ಟಾಟಾ ಸಂಸ್ಥೆಯ ಬೆಳವಣಿಗೆ ಮಾತ್ರವಲ್ಲದೇ, ದೇಶದ ಪ್ರಗತಿಗೂ ಆದ್ಯತೆ ನೀಡಿದ ಅವರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿತಾಗುವಂಥದ್ದು” ಎಂದು ಲಾಡ್ ತಮ್ಮ ನುಡಿನಮನದಲ್ಲಿ ಹೇಳಿದರು.
