Monday, November 23, 2026
HomeBelagaviಹಣ ಕಳೆದುಕೊಂಡ ವಯೊವೃದ್ದೆಯ ಬ್ಯಾಗ್ ಹಿಂದಿರುಗಿಸಿ ಮಾನವಿಯತೆ ಮೆರೆದ ಸಮಾಜ ಸೇವಕ ರವಿ ಮಾದಾರ

ಹಣ ಕಳೆದುಕೊಂಡ ವಯೊವೃದ್ದೆಯ ಬ್ಯಾಗ್ ಹಿಂದಿರುಗಿಸಿ ಮಾನವಿಯತೆ ಮೆರೆದ ಸಮಾಜ ಸೇವಕ ರವಿ ಮಾದಾರ

ಕನ್ನಡಮ್ಮ ಸುದ್ದಿ

ಖಾನಾಪುರ: ತಾಲೂಕಿನ ಹರೂರಿ ಗ್ರಾಮದ ಶಾರದಾ ಮಾರುತಿ ಗೋದೊಳಕರ ಎಂಬ ವಯೊವೃದ್ದ ಮಹಿಳೆ ಖಾನಾಪೂರ ಪಟ್ಟಣದಲ್ಲಿ 8000 ಸಾವಿರ ಹಣ ಹಾಗೂ ಆಧಾರ್ ಕಾರ್ಡ್ ಬ್ಯಾಂಕ್ ಪಾಸಬುಖ ಪ್ಯಾನ ಕಾರ್ಡ್ ರೇಷನ್ ಕಾರ್ಡ್ ಮುಂತಾದ ದಾಖಲೆಗಳಿರುವ ಕೈ ಚೀಲವನ್ನು ಕಳೆದುಕೊಂಡಿದ್ದರು

ಅದು ಸಮಾಜ ಸೇವಕ ದಲಿತ ಮುಖಂಡ ರವಿ ಮಾದಾರ ಅವರಿಗೆ ಸಿಕ್ಕಿತ್ತು ಅದನ್ನ ಇಂದು ಖಾನಾಪೂರ ಪೋಲೀಸ್ ಠಾಣೆಗೆ ತಂದು ಸಂಭಂದಪಟ್ಟವರಿಗೆ ತಲುಪಿಸಲು ಹೇಳಿ ಮಾನವಿಯತೆ ಮೆರೆದಿದ್ದಾರೆ ಪಿ ಐ ಮಂಜುನಾಥ ನಾಯ್ಕ ಅವರು ಇವರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಸಾರ್ವಜನಿಕರು ಇಂತ ಕೆಲಸ ಮಾಡಿ ಮಾದರಿ ಆಗಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಅಪರಾಧ ಪಿಎಸ್ಆಯ್ ಚನ್ನಬಸವ ಬಬಲಿ ಪೋಲಿಸ್ ಪೇದೆ ಜಗದೀಶ್ ಕಾದ್ರೊಳ್ಳಿ ಉಪಸ್ಥಿತರಿದ್ದರು. ರವಿ ಮಾದಾರ ಅವರ ಕಾರ್ಯಕ್ಕೆ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಹಾಗೂ ಗಡಿನಾಡು ಹಿತರಕ್ಷಣಾ ವೇದಿಕೆ ತಾಲುಕಾ ಅದ್ಯಕ್ಷ ರಾಜು ಖಾತೇದಾರ  ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ:ಪ್ರಸನ್ನ ಕುಂಬಾರ

ಖಾನಾಪುರ

Total Views 318
RELATED ARTICLES

Most Popular

Recent Comments

KNN City News
Home
E-Paper