Monday, November 23, 2026
HomeBelagaviಬೆಳಗಾವಿ ಹುಕ್ಕೇರಿ ಶ್ರೀಗಳ ಆಶೀರ್ವಾದ ‌ಪಡೆದ ಸಿಎಂ ರಾಜಕೀಯ ಸಲಹೆಗಾರ ಪಾಟೀಲ್

ಬೆಳಗಾವಿ ಹುಕ್ಕೇರಿ ಶ್ರೀಗಳ ಆಶೀರ್ವಾದ ‌ಪಡೆದ ಸಿಎಂ ರಾಜಕೀಯ ಸಲಹೆಗಾರ ಪಾಟೀಲ್

 

ಬೆಳಗಾವಿ

ಸಿಎಂ ರಾಜಕೀಯ ಸಲಹೆಗಾರರು, ಆಳಂದ ತಾಲೂಕಿನ ಶಾಸಕ ಬಿ.ಆರ್. ಪಾಟೀಲ್ ಬುಧವಾರ ನಗರದಲ್ಲಿರುವ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಗುರುಶಾಂತೇಶ್ವರ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಆರ್‌.ಪಾಟೀಲ್ ಅವರು, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ನಮ್ಮ ಮನೆತನದ ಗುರುಮಠ. ನಾವು ಸುಮಾರು ವರ್ಷಗಳಿಂದ ಶ್ರೀ ಮಠಕ್ಕೆ ನಡೆದುಕೊಳ್ಳುತ್ತೇವೆ. ಗುರುಶಾಂತೇಶ್ವರರ ಕೃಪಾ ಆಶೀರ್ವಾದ ಶಾಸಕನಾಗಿ, ಉಪಸಭಾಪತಿಯಾಗಿ ಸದ್ಯ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಗುರುಶಾಂತೇಶ್ವರರ ಕೃಪೆಯೇ ಕಾರಣ. ನಮ್ಮ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಹಿರೇಮಠದ ಶಿಷ್ಯರು ಎಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ ಎಂದರು.
ಆಶೀರ್ವಾದ ‌ದಯಪಾಲಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿ.ಆರ್. ಪಾಟೀಲ್ ಅವರು ಸೈದ್ಧಾಂತಿಕ ರಾಜಕಾರಣ ಮಾಡುವ ಅಪರೂಪದ ‌ವ್ಯಕ್ತಿ. ಇವತ್ತು ಮುಖ್ಯಮಂತ್ರಿ ‌ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರರಾಗಿ ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಇಡೀ ಸದನದಲ್ಲಿ ಬಹಳಷ್ಟು ಜನ ಹಿರಿಯರಿದ್ದಾರೆ‌. ಅದರಲ್ಲಿ ಬಿ.ಆರ್.ಪಾಟೀಲ್ ರು ಕೂಡಾ ಒಬ್ಬರು. ಇವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಕೆಎಂಎಫ್ ಅಧ್ಯಕ್ಷ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Total Views 45
RELATED ARTICLES

Most Popular

Recent Comments

KNN City News
Home
E-Paper