
ಬೆಳಗಾವಿ
ನಾನು ರಾಜಕಾರಣದಲ್ಲಿ ಕೈಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ ವಿಧಾನ ಪರಿಷತ್ ಬುದ್ಧಿವಂತರ ಚಾವಡಿ. ಅಲ್ಲಿ ಎಲ್ಲರೂ ದೃತರಾಷ್ಟ್ರ ಆಗಬಾರದೀತ್ತು ನನಗೆ ತುಂಬಾ ನೋವು ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದರು.
ಶುಕ್ರವಾರ ಬೆಳಗಾವಿ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿನ್ನೆ ಸದನದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದೇವು. ಸದನವನ್ನು ಸಭಾಪತಿ 10 ನಿಮಿಷಗಳ ಕಾಲ ಮುಂದೂಡಿದ್ದರು. ನಾನು ಸದನದಲ್ಲಿ ನನ್ನ ಆಸನದಲ್ಲಿ ಕುಳಿತಿದೆ ಬಳಿಕ ನಡೆದ ಘಟನೆ ಎಲ್ಲರಿಗೂ ತಿಳಿದ ವಿಷಯ ಎಂದರು.
ಸಿ.ಟಿ.ರವಿ ಅವರು ಡ್ರಗ್ ಎಡಿಟ್ ರಾಹುಲ್ ಗಾಂಧಿ ಎಂದು ನನ್ನ ನೋಡಿ ಕೂಗಾಡಿದರು. ನಾನು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನೀವು ಅಪಘಾತ ಮಾಡಿದ್ದೀರಾ ನೀವು ಕೊಲೆಗಡುಕರು ಎನ್ನಬಹುದಾ ಎಂದ ಕೂಡಲೇ ನನಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ನೋವು ಉಂಟು ಮಾಡಿದೆ ಎಂದರು.
ರಾಜಕಾರಣದಲ್ಲಿ ರೋಷಾವೇಷವಾಗಿ ಮಾತನಾಡಬಹುದು. ಆದರೆ ಇಷ್ಟೊಂದು ಕೀಳು ಮಟ್ಟದಲ್ಲಿ ಪದಗಳನ್ನು ಬಳಸವುದು ಸರಿಯಲ್ಲ ಎಂದರು.
ಸಿ.ಟಿ.ರವಿ ವಿರುದ್ಧ ನಾನು ಸಭಾಪತಿಗೆ ದೂರು ಕೊಟ್ಟಿದ್ದೇನೆ. ನನ್ನ ಸೊಸೆ ಹಾಗೂ ನನ್ನ ಮಗ ಘಟನೆ ನಡೆದ ಕೂಡಲೇ ನನಗೆ ದೂರವಾಣಿ ಕರೆ ಅಮ್ಮಾ ನೀನು ವಾರಿಯರು ದೈರ್ಯವಾಗಿರುವ ಎಂದು ಸತ್ಮಸ್ಥೈರ್ಯ ತುಂಬಿದ್ದಾರೆ ಎಂದರು.
