Monday, November 23, 2026
HomeBelagaviಪಾಲಿಕೆಯ ಕಾನೂನು ಸಲಹೆಗಾರರಾಗಿ ಜಿಂಗ್ರಾಳ್ಕರ್ ನೇಮಕ

ಪಾಲಿಕೆಯ ಕಾನೂನು ಸಲಹೆಗಾರರಾಗಿ ಜಿಂಗ್ರಾಳ್ಕರ್ ನೇಮಕ

ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಕಾನೂನು ಸಲಹೆಗಾರರಾಗಿ ಜಿಂಗ್ರಾಳ್ಕರ್ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಪಾಲಿಕೆಯ ಕಾನೂನು ಸಲಹೆಗಾರರಾಗಿದ್ದ ಮಹಾಂತ‌ ಶೆಟ್ಟಿ ಪಾಲಿಕೆ ಆಸ್ತಿಯನ್ನು ಸಂರಕ್ಷಿಸಿಕೊಳ್ಳುವಲ್ಲಿ ನ್ಯಾಯಾಲಯದಲ್ಲಿ ಸಮರ್ಪಕವಾದ ವಾದ ಮಂಡಿಸದೆ ಪಾಲಿಕೆಗೆ ಹಾಗೂ ಸರಕಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಮಾಡಿದ್ದಾರೆ ಎನ್ನುವ ಆರೋಪ ಇವರ ಮೇಲೆ ಕೇಳಿ ಬಂದಿತ್ತು.
ಪಾಲಿಕೆಯಲ್ಲಿ ಸರಕಾರದ ಪರವಾಗಿ ಕೆಲಸ ಮಾಡಬೇಕಿದ್ದ ಮಹಾಂತ‌ ಶೆಟ್ಟಿ ಬಿಜೆಪಿ‌ ಸದಸ್ಯರು ಹಾಗೂ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಕಾಂಗ್ರೆಸ್ ಸದಸ್ಯರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಜಿಂಗ್ರಾಳಕರ ಅವರನ್ನು ಪಾಲಿಕೆ ಕಾನೂನು ಸಲಹೆಗಾರರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

Total Views 145
RELATED ARTICLES

Most Popular

Recent Comments

KNN City News
Home
E-Paper