
ಬೆಳಗಾವಿ
ನಾನು ದೇವರ ಮೇಲೆ ನಂಬಿಕೆ ಇಟ್ಟವಳು. ಸಿ.ಟಿ.ರವಿ ಅವರು ಧರ್ಮಸ್ಥಳ ನಿಮ್ಮ ಕ್ಷೇತ್ರದಿಂದ ಸಮೀಪ ಇದೆ. ನಿಮ್ಮ ಕುಟುಂಬ ಕರೆದುಕೊಂಡು ಬನ್ನಿ ನಾನು ಬರುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲ್ ಹಾಕಿದರು.
ಮಂಗಳವಾರ ಬೆಳಗಾವಿ ಕುವೆಂಪು ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ನಿಮಗೆ ಸವಾಲ್ ಹಾಕುತ್ತಿಲ್ಲ. ನೀವು ದತ್ತ ಮಾಲೆಯ‌್ನು ಹಾಕುತ್ತಿರಾ. ರಾಮನ ಮೇಲೆ ನಂಬಿಕೆ ಇಟ್ಟವರು ನೀವು. ನಿಮ್ಮ ಕುಟುಂಬವನ್ನು ಕರೆದುಕೊಂಡು ಧರ್ಮಸ್ಥಳಕ್ಕೆ ಬನ್ನಿ ನಾನು ನನ್ನ ಕುಟುಂಬ ಕರೆದುಕೊಂಡು ಬರುತ್ತೇನೆ ಎಂದರು.
