
ಬೆಳಗಾವಿ
ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಗಾಂಧಿ ಅಧಿವೇಶನ ಇದು ನಕಲಿ ಗಾಂಧಿಗಳು ನಡೆಸುತ್ತಿರುವ ಅಧಿವೇಶನ. ಇದರಲ್ಲಿ ಬಿಜೆಪಿಯವರು ಪಾಲ್ಗೊಳ್ಳುವುದಿಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಮಂಗಳವಾರ ಕಾಡಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಅಧಿವೇಶನವನ್ನು ಮಹಾತ್ಮ ಗಾಂಧಿಜಿ ಅವರು ಸ್ವಾತಂತ್ರ್ಯ ಹೋರಾಟದ ಸಲುವಾಗಿ ಅಧಿವೇಶನ ಮಾಡುತ್ತಿದ್ದರು. ಜನರಲ್ಲಿ ಜಾಗೃತಿ ಮಾಡುವ ವೇದಿಕೆಯನ್ನು ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯದ ಸಲುವಾಗಿ ಮಾಡಿದ್ದರು. ಆದರೆ ಕಾಂಗ್ರೆಸ್ ಈಗ ಒಡೆದು ಹೋಗಿದೆ. ಎನ್ ಸಿಪಿ, ತೃಣಮೂಲ ಕಾಂಗ್ರೆಸ್ ಹಾಗೂ ಎಐಸಿಸಿ ಹೀಗೆ ಭಾಗವಾಗಿದೆ. ಮೂಲ ಕಾಂಗ್ರೆಸ್ ಇಲ್ಲವೇ ಇಲ್ಲ ಎಂದರು.
ಮಹಾತ್ಮ ಗಾಂಧಿಜಿಯವರ ವಿಚಾರವನ್ನು ಹೆಚ್ಚು ಪ್ರಕರಗೊಳಿಸುವಲ್ಲಿ ಒತ್ತು ಕೊಡಬೇಕಿತ್ತು. ಇದಕ್ಕೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಮಾಡಬೇಕಿತ್ತು. ಆದರೆ ಇದೊಂದು ರಾಜಕೀಯ ಕಾರ್ಯಕ್ರಮ ಮಾಡಲು ಕಾಂಗ್ರೆಸ್ ಹೊರಟಿದೆ ಎಂದರು.
ಕಾಂಗ್ರೆಸ್ ಅಧಿವೇಶನಕ್ಕೆ ರಾಜ್ಯ ಸರಕಾರ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಬೇರೆ ಕಾರ್ಯಕ್ರಮ ಮಾಡಲು ಹಿಂದೆ ಮುಂದೆ ನೋಡುವ ಸರಕಾರ ಕಾಂಗ್ರೆಸ್ ನೂರು ವರ್ಷದ ಅಧಿವೇಶನದಲ್ಲಿ ತರಾತುರಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಘಟದ ಅಧ್ಯಕ್ಷ ಸುಭಾಷ್ ಪಾಟೀಲ್, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
