Monday, November 23, 2026
HomeBelagaviಪೊಲೀಸರ ಮೇಲೆ ಗರಂ ಆದ ಪರಮೇಶ್ವರ

ಪೊಲೀಸರ ಮೇಲೆ ಗರಂ ಆದ ಪರಮೇಶ್ವರ

 

ಬೆಳಗಾವಿ
ಬಿಜೆಪಿ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿಯನ್ನು ಬಂಧಿಸಿ ರಾತ್ರಿಯಿಡೀ ಪೊಲೀಸರು ಸುತ್ತಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಬುಧವಾರ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ ಗೃಹ ಸಚಿವ ಪರಮೇಶ್ವರ ಘಟನಾವಳಿಗಳ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಪ್ರಕರಣದ ಕುರಿತು ಮಾಹಿತಿ ನೀಡದಿದ್ದಕ್ಕೆ ಗೃಹ ಸಚಿವ ಗರಂ ಆದ ಅವರು, ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮತ್ತು ಎಸ್‌ಪಿ ಭೀಮಾಶಂಕರ್ ಗುಳೇದ್ ಮೇಲೆ ಅಸಮಾಧಾನ ಹೊರ ಹಾಕಿದರು.
ಘಟನೆ ಸಂಪೂರ್ಣ ಮಾಹಿತಿ ನೀಡಿದ ಯಡಾ ಮಾರ್ಟಿನ್. ಸಿಟಿ ರವಿ ಸುರಕ್ಷತೆ ದೃಷ್ಟಿಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಗಿ ಸಮಜಾಯಿಷಿ ನೀಡಿದರು‌.
ಇದೇ ವೇಳೆ ಇಂದು ಕಮಿಷನರ್ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ಕುರಿತು ಗೃಹ ಸಚಿವರ ಗಮನಕ್ಕೆ ಯಡಾ ಮಾರ್ಟಿನ್ ಗಮನಕ್ಕೆ ತಂದರು.
ಸಭೆಯಲ್ಲಿ ಎಡಿಜಿಪಿ ಹಿತೇಂದ್ರ, ಐಜಿಪಿ ವಿಕಾಸ್ ಕುಮಾರ್, ಕಮಿಷನರ್ ಯಡಾ ಮಾರ್ಟಿನ್, ಎಸ್‌ಪಿ ಭೀಮಾಶಂಕರ್ ಗುಳೇದ್, ಹುಬ್ಬಳ್ಳಿ ಧಾರವಾಡ ಕಮಿಷನರ್ ಶಶಿಕುಮಾರ್ ಸಭೆಯಲ್ಲಿ ಭಾಗಿ. ಕಮಿಷನರ್ ಕಚೇರಿಯಲ್ಲೇ ಚರ್ಚೆ ಮಾಡಿದರು.

Total Views 190
RELATED ARTICLES

Most Popular

Recent Comments

KNN City News
Home
E-Paper