Monday, November 23, 2026
HomeBelagaviಬೆಳಗಾವಿ ಪಾಲಿಕೆಯನ್ನು ವಿರ್ಸಜನೆ ಮಾಡಿ: ಟೋಪಣ್ಣವರ

ಬೆಳಗಾವಿ ಪಾಲಿಕೆಯನ್ನು ವಿರ್ಸಜನೆ ಮಾಡಿ: ಟೋಪಣ್ಣವರ

ಬೆಳಗಾವಿ
ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಇಲ್ಲಿನ ಅನಗೋಳದಲ್ಲಿ ಧರ್ಮವೀರ ಸಂಭಾಜಿ ಪುತ್ಥಳಿ ಲೋಕಾರ್ಪಣೆಗೊಳಿಸುವ ವೇಳೆ ಪಾಲಿಕೆಯ ಮೇಯರ್ ಸವಿತಾ ಕಾಂಬಳೆ ಪಕ್ಕದಲ್ಲಿ ನಿಂತು ಜೈ ಮಹಾರಾಷ್ಟ್ರ ಘೋಷಣೆ ಕೂಗಿಸಿದ ಪಾಲಿಕೆಯನ್ನು ಸರಕಾರ ವಿಸರ್ಜನೆ ಮಾಡಬೇಕೆಂದು ರಾಜಕುಮಾರ ಟೋಪಣ್ಣವರ ಒತ್ತಾಯಿಸಿದ್ದಾರೆ.
ಕನ್ನಡದ ನೆಲದಲ್ಲಿ ನಿಂತುಕೊಂಡು ಜೈ ಮಹಾರಾಷ್ಟ್ರ ಘೋಷಣೆ ಕೂಗಿದ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಶಿವೇಂದ್ರ ರಾಜೆ ಬೋಸಲೆ ವಿರುದ್ಧ ಜಿಲ್ಲಾಡಳಿತದ ಕ್ರಮ ಕೈಗೊಳ್ಳಬೇಕು. ತಮ್ಮ ಭಾಷಣದ ಕೊನೆಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಹಾಕಿ ಇಡೀ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದ ಪಾಲಿಕೆಯಲ್ಲಿ ಕನ್ನಡದ ಆಡಳಿತ ಮಾಡಬೇಕು ಎಂದು ಹಲವಾರು ಕನ್ನಡಿಗರು ಹೋರಾಟ ಮಾಡಿಕೊಂಡು ಬಂದಿದ್ದು ಇತಿಹಾಸ ಇದೆ. ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ‌ ಬಹುಮತ‌ ಬಂದ ಬಳಿಕ ಇದೇ ಮೊದಲ ಬಾರಿಗೆ ಕನ್ನಡ‌ ಮೇಯರ್ ಪಕ್ಕದಲ್ಲಿಯೇ ನಿಂತುಕೊಂಡು ಮಹಾರಾಷ್ಟ್ರ ಲೋಕೋಪಯೋಗಿ ಸಚಿವ ಜೈ ಮಹಾರಾಷ್ಟ್ರ ಕೂಗಿಸಲು ರಾಜ್ಯ ಬಿಜೆಪಿಯ ಕುಮ್ಮಕ್ಕು ನೀಡಿದೆ ಕೂಡಲೇ ಜಿಲ್ಲಾಡಳಿತ ಸಂಭಾಜಿ ಪುತ್ಥಳಿ ಅನಾವರಣದ ವಿಡಿಯೋ ಚಿತ್ರೀಕರಣ ತರೆಸಿಕೊಂಡು ಕನ್ನಡ ನಾಡಿನಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಹಾಗೂ ವೇದಿಕೆಯ ಮೇಲಿದ್ದ ಎಲ್ಲರ ಮೇಲೆ ಕ್ರಮ ಜರುಗಿಸಬೇಕು ಹಾಗೂ ಕನ್ನಡಿಗರ 45 ಲಕ್ಷ ದುಡ್ಡಿನಲ್ಲಿ ಸಂಭಾಜಿಯ ಪ್ರತಿಮೆ ಮಾಡಿಸಿ.
ಮಹಾರಾಷ್ಟ್ರ ಸಚಿವರನ್ನ ಕರೆಸಿ ಅವನ ಕಡೆಯಿಂದ ಜೈ ಮಹಾರಾಷ್ಟ್ರ ಹೇಳಿಸಿದರ ಮೇಲೂ ಕ್ರಮ‌ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Total Views 105
RELATED ARTICLES

Most Popular

Recent Comments

KNN City News
Home
E-Paper