Monday, November 23, 2026
HomeBelagaviಮಹಾ ಸಚಿವ, ಶಾಸಕ, ಮೇಯರ್ ವಿರುದ್ಧ ನಾಡದ್ರೋಹಿ ಪ್ರಕರಣ ದಾಖಲಿಸುವಂತೆ ಒತ್ತಾಯ

ಮಹಾ ಸಚಿವ, ಶಾಸಕ, ಮೇಯರ್ ವಿರುದ್ಧ ನಾಡದ್ರೋಹಿ ಪ್ರಕರಣ ದಾಖಲಿಸುವಂತೆ ಒತ್ತಾಯ

 

 

ಬೆಳಗಾವಿ
ಅನಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆಯ ವೇಳೆ ಮಹಾರಾಷ್ಟ್ರದ ಸಚಿವ ನಾಡದ್ರೋಹಿ ಘೋಷಣೆ ಕೂಗಿದರೂ ತಡೆಯದ ಶಾಸಕ ಅಭಯ ಪಾಟೀಲ, ಮೇಯರ ಸವಿತಾ ಕಾಂಬಳೆ, ಮಹಾರಾಷ್ಟ್ರ ಸಚಿವ ಶಿವೇಂದ್ರಸಿಂಹರಾಜೆ ಭೋಸಲೆ ಮೇಲೆ ನಾಡದ್ರೋಹದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಮಂಗಳವಾರ ಕಿತ್ತೂರು ಕರ್ನಾಟಕ ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿಯ ಅನಗೋಳ ಗ್ರಾಮದಲ್ಲಿ ಧರ್ಮವೀರ ಸಂಭಾಜಿ ರಾಜೆ ಮೂರ್ತಿ ಉದ್ಘಾಟನೆ ಕುರಿತು ಜಿಲ್ಲಾಧಿಕಾರಿಗಳೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಜ. 5ರಂದು ಯಾರೂ ಸ್ಥಳದಲ್ಲಿ ಜಮಾಯಿಸಬಾರದು ಧರ್ಮವೀರ ಸಂಭಾಜಿ ರಾಜೆ ಮೂರ್ತಿ ಉದ್ಘಾಟನೆ ಮುಂದೂಡಲಾಗಿದೆ ಎಂದು ಆದೇಶ ಮಾಡಿದ್ದರೂ ಕೂಡ ಮತ್ತು ಕಾಮಗಾರಿ ಅಪೂರ್ಣವಿದ್ದರೂ ಕೂಡ ತಮ್ಮ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಿ ಒತ್ತಾಯಪೂರ್ವಕ ಮೂರ್ತಿ ಉದ್ಘಾಟನೆ ಮಾಡಿದ್ದು ಖಂಡಿಸಿದ್ದಾರೆ.
ಸಂಭಾಜಿ ಪುತ್ಥಳಿ ಉದ್ಘಾಟನೆಗೆ ಮಹಾರಾಷ್ಟ್ರದ ಸಚಿವ ಶಿವೇಂದ್ರಸಿಂಗ್ ರಾಜೆ ಭೋಸಲೆ ಕರೆಯಿಸಿ ಅವರ ಕಡೆಯಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿಸಿ ನಾಡದ್ರೋಹ ಎಸಗಿದ್ದಾರೆ. ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಎಂದಾಗ ಶಾಸಕ ಅಭಯ ಪಾಟೀಲ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ ಸವಿತಾ ಕಾಂಬಳೆಯವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದು, ಕರ್ನಾಟಕದ ಜನತೆಗೆ ಮಾಡಿದ ಅಪಮಾನವಾಗಿದೆ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಕಸ್ತೂರಿ ಭಾವಿ, ದೇವೆಂದ್ರ ಕಾಂಬಳೆ, ವಾಸು ಬಸನಾಯ್ಕರ್, ಸಂತೋಷ ತಳ್ಳಿಮನಿ, ಶಶಿಕಾಂತ ಅಷ್ಟೇಕರ್, ಭರ್ಮಾ ಕಾಂಬಳೆ, ನಾಗೇಶ ತಿಂಬುಲಿ, ಅನಿಲ್ ದಡ್ಡಿಮನಿ, ಬಾಗಣ್ಣ ಕುರುಬರ ಸೇರಿದಂತೆ ಇನ್ನಿತರರು

Total Views 171
RELATED ARTICLES

Most Popular

Recent Comments

KNN City News
Home
E-Paper