Monday, November 23, 2026
HomeBelagaviಪತಿಯ ಮುಖಕ್ಕೆ ಮಸಿ ಬಳಿದ ಪತ್ನಿ

ಪತಿಯ ಮುಖಕ್ಕೆ ಮಸಿ ಬಳಿದ ಪತ್ನಿ

ಬೆಳಗಾವಿ
ಬೇರೆ ಹೆಣ್ಣಿನ ವ್ಯಾಮೋಹದಿಂದ ಕಟ್ಟಿಕೊಂಡ ಪತ್ನಿಗೆ ಕೈ ಕೊಟ್ಟು ಬೇರೆಯ ಹೆಣ್ಣಿನ ಹಿಂದೆ ಪಂಚಾಯತಿ ಸದಸ್ಯೆಯ ಪತಿ ಪರಾರಿಯಾದ ಘಟನೆ ಬೆಳಗಾವಿ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಸೀತಮನಿ ಎಂಬಾತನೇ ಮಗನ ಜೊತೆಗೆ ಎಸ್ಕೇಪ್ ಆಗಿದ್ದ ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯೆ ವಾಣಿಶ್ರೀ ಕುಟುಂಬ ಕಂಗಾಲಾಗಿದ್ದಾರೆ‌‌
ಗಂಡ ಓಡಿ ಹೋದ ಬೆನ್ನಲ್ಲೇ ತಿಳಿದು ಆತನ ಫೋಟೊಗಳಿಗೆ ಮಸಿ ಬಳಿದ ಹೆಂಡತಿ. ಅಲ್ಬಮ್ ನಲ್ಲಿರುವ ಗಂಡನ ಎಲ್ಲಾ ಫೋಟೊಗಳಿಗೆ ಮಸಿ ಬಳಿದ ಹೆಂಡತಿ ವಾಣಿಶ್ರೀ. ಒಂದು ವಾರದ ಹಿಂದೇ ಇದೇ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಜೊತೆಗೆ ಪರಾರಿಯಾಗಿದ್ದ. ಹಲವು ಬಾರಿ ಗಂಡ ಬಸವರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ವಾಣಿಶ್ರೀ ಮನವಿ ಮಾಡಿದ್ದರು‌. ಪೊಲೀಸರು ಮೊದಲೇ ಕ್ರಮ ವಹಿಸಿದ್ದರೆ ಗಂಡ ಓಡಿ ಹೋಗ್ತಿರಲಿಲ್ಲ ಎಂದ ಹೆಂಡತಿ ಅಳಲು ತೋಡಿಕೊಂಡಿದ್ದಾರೆ. ವಾಣಿಶ್ರೀಗೆ ಮೂರು ಮಕ್ಕಳಿದ್ದು ಒಂದು ಮಗನನ್ನ ಕರೆದುಕೊಂಡು ಹೋಗಿರುವ ಗಂಡ ಬಸವರಾಜ್. ಗಂಡ ಹೋಗಲಿ ನನ್ನ ಮಗ ಬೇಕು ತಂದು ಕೊಡಿ ಅಂತಾ ಹೆಂಡತಿ ಪೊಲೀಸರಿಗೆ ಒತ್ತಾಯ ಮಾಡಿದ್ದಳೆ.
ಎಂಟು ವರ್ಷದ ಹಿಂದೆ ಬಸವರಾಜ್ ಜೊತೆಗೆ ಮದುವೆಯಾಗಿದ್ದ ವಾಣಿಶ್ರೀ. ಗಂಡ ಹೇಳದೇ ಕೇಳದೇ ಪರಿಸ್ತ್ರೀ ಜೊತೆಗೆ ಓಡಿ ಹೋಗಿದ್ದಕ್ಕೆ ಕಂಗಾಲದ ಹೆಂಡತಿ ಮಕ್ಕಳು. ಇತ್ತ ಮಾಸಾಬಿ ಎರಡು ಮಕ್ಕಳ ಜೊತೆಗೆ ಕಾಣೆಯಾಗಿದ್ದಾಳೆ ಅಂತಾ ಗಂಡ ಆಸೀಫ್ ಸೈಯದ್ ಕೇಸ್ ದಾಖಲಿಸಿದ್ದಾರೆ. ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿರುವ ಗಂಡ ಆಸೀಫ್. ಚಿನ್ನಾಭರಣ, ಹಣ, ಕಾರಿನ ಜೊತೆಗೆ ಕಾಣೆಯಾಗಿದ್ದಾಳೆ ಅಂತಾ ನಾಲ್ಕು ಕೇಸ್ ಹಾಕಿದ್ದು, ಮಾರಿಹಾಳ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Total Views 213
RELATED ARTICLES

Most Popular

Recent Comments

KNN City News
Home
E-Paper