Monday, November 23, 2026
HomeBelagaviಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟ

ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟ

ಬೆಳಗಾವಿ
ಸರಕಾರಕ್ಕೆ ಸಡ್ಡು ಹೊಡೆದ ಎಂಇಎಸ್ ಇಂದು ಎಂಇಎಸ್ ಜಾಗತಿಕ ಯುವ ದಿನಾಚಾರಣೆಗೆ ನಿರ್ಧಾರ ಮಾಡಲಾಗಿದೆ.
ಬೆಳಗಾವಿಯ ಮರಾಠಾ ಮಂಡಳದಲ್ಲಿ ಎಂಇಎಸ್ ಮುಖಂಡ ಶುಭಂ ಸೆಳೆಕೆ ನೇತೃತ್ವದಲ್ಲಿ ನಡೆದ ಎಂಇಎಸ್ ಮುಖಂಡರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ‌.
ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಜ. 17 ರಂದು ಹುತಾತ್ಮ ದಿನಾಚರಣೆಗೂ ಮಾಡಲಾಗುವುದು. ಸರಕಾರ ಬೆಳಗಾವಿಗೆ ಬಂದಗಲೇಲ್ಲ ಯಾವುದಾದರೂ ವಿಚಾರ ಇಟ್ಟುಕೊಂಡು ಮೊಂಡುತನ ಪ್ರದರ್ಶನ ಮಾಡುತ್ತಿರುವ ಎಂಇಎಸ್ ಅಧಿವೇಶನದಲ್ಲಿ ಮಹಾಮೇಳಾವ್ ನಡೆಸಿದ್ದ ಪುಂಡಾಟ ಮಾಡಿದ್ದರು.
ಗಡಿ ವಿಷಯವಾಗಿ ಮಹಾರಾಷ್ಟ್ರ ಸರಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂದು ಕೊಲ್ಲಾಪುರ ಚಲೋಗೆ ಕರೆ ನೀಡಲಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೂ ಮುನ್ನ ಎಂಇಎಸ್ ಇಂದಿನಿಂದ ಜ.17ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

Total Views 219
RELATED ARTICLES

Most Popular

Recent Comments

KNN City News
Home
E-Paper