
ಬೆಳಗಾವಿ
ಹಲಗಾ- ಮಚ್ಚೆ ಹೆದ್ದಾರಿಗೆ ರೈತರ ವಿರೋಧ ವ್ಯಕ್ತವಾಯಿದ್ದು ರೈತರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡುವೆ ವಾಗ್ವಾದ ನಡೆದ ಘಟನೆ ಭಾನುವಾರ ನಡೆದಿದೆ.
ಬೆಳಗಾವಿಯ ಹಲಗಾದಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ಆರಂಭ ಮಾಡಿದ್ದರು. ಝೀರೋ ಪಾಯಿಂಟ್ ನಿರ್ಧಾರ ಮಾಡುವವರೆಗೂ ಕಾಮಗಾರಿಗೆ ಆರಂಭಿಸಲು ರೈತರ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಕಾಮಗಾರಿ ಮಾಡುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ಆದೇಶ ಪ್ರತಿ ತೋರಿಸುವಂತೆವ ರೈತರ ಪಟ್ಟು ಹಿಡಿದಿದ್ದರು. ಈ ನಡುವೆ ಹೆದ್ದಾರಿ ಪ್ರಾಧಿಕಾರ ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
