
ಬೆಳಗಾವಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈಗ ಚಿಕಿತ್ಸೆ ನೀಡುವ ಅಗತ್ಯ ಇಲ್ಲ. ಅವರು ವಿಶ್ರಾಂತಿ ಪಡೆದು ಮತ್ತೆ ಜನಸೇವೆಗೆ ಮರಳಲಿದ್ದಾರೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತದಲ್ಲಿ ಅವರಿಗೆ ಗಾಯವಾಗಿದೆ. ಅವರಿಗೆ ಬೆನ್ನುಹುರಿ ಗಾಯವಾಗಿದೆ. ಅವರೊಂದಿಗೆ ಹತ್ತ ನಿಮಿಷ ಮಾತನಾಡಿರುವೆ ಲಕ್ಷ್ಮೀ ಹೆಬ್ಬಾಳಕರ ಅವರು ಧೈರ್ಯವಂತರು. ಅವರಿಗೆ ದೇವರ ಆಶೀರ್ವಾದ ಏನು ಆಗಿಲ್ಲ. ಕಾರು ನೋಡಿದರೆ ಏನಾಗಿದೆ ಎಂಬ ಭಯ ಆಗಿತ್ತು.ಇವಾಗ ಆರೋಗ್ಯವಾಗಿದ್ದಾರೆ ಎಂದರು.
ಇಂತಹ ಸಂದರ್ಭಗಳಲ್ಲಿ ಯೋಗ, ಪ್ರಮಾಣಮಾಯ ಪ್ರಯೋಜನೆಗೆ ಬರುವುದಿಲ್ಲ. ಸಚಿವರಿಗೆ ಈಗ ಬೇಕಿರೋದು ಮೆಡಿಕಲ್ ಸೈನ್ಸ್ ಚಿಕಿತ್ಸೆ ಎಂದರು.
