Monday, November 23, 2026
HomeBelagaviಬೆಳಗಾವಿಯಲ್ಲೊಂದು ಚೆಲುವಿನ ಚಿತ್ತಾರ ಲವ್ ಸ್ಟೋರಿ..

ಬೆಳಗಾವಿಯಲ್ಲೊಂದು ಚೆಲುವಿನ ಚಿತ್ತಾರ ಲವ್ ಸ್ಟೋರಿ..

ಬೆಳಗಾವಿ
ಇದು ಚೆಲ್ಲುವಿನ ಚಿತ್ತಾರ ಸಿನಿಮೀಯ ರೀತಿಯ ಲವ್ ಸ್ಟೋರಿ. ಅಲ್ಲಿ ಮಾದೇಸಾ (ಗಣೇಶ್)  ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದರೇ, ಇಲ್ಲಿ ಸೌರಭ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸಿನಿಮಾದಲ್ಲೂ ಎಸ್ಸೆಸ್ಸೆಲ್ಸಿ ಹುಡುಗಿ ಮೇಲೆ ಪ್ರೀತಿ ಇಲ್ಲಿಯೂ ಎಸ್ಸೆಸ್ಸೆಲ್ಸಿ ಹುಡುಗಿ ಜೊತೆ ಪ್ರೀತಿ. ಇದೊಂದು ಚೆಲ್ಲುವಿನ ಚಿತ್ತಾರದ ಪ್ರೀತಿ.
ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಪ್ರೀತಿ ಮಾಡಿದ ತಪ್ಪಿಗೆ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಅಮಾನವೀಯ ಘಟನೆ ನಡೆದು ಒಂದು ವರ್ಷ ಮಾಸುವ ಮುನ್ನವೇ ಚೆಲುವಿನ ಚಿತ್ತಾರ ಸಿನಿಮಾ ಮಾದರಿಯಲ್ಲಿ ಯುವಕನೊಬ್ಬ ಎಸ್ಸೆಸ್ಸೆಲ್ಸಿ ಯುವತಿಯನ್ನು ಪ್ರೀತಿ ಮಾಡಿದ್ದಕ್ಕೆ ಥಳಿಸಿದ ಘಟ‌ನೆ ತಡವಾಗಿ ಬೆಳಕಿಗೆ ಬಂದಿದೆ.
ಯುವಕ ಪ್ರೀತಿ ಮಾಡಿದ ಎನ್ನುವ  ಕಾರಣಕ್ಕೆ ಹುಡುಗಿ ಮನೆಯವರು ಯುವಕನನ್ನ ಕರೆಯಿಸಿ ಹಲ್ಲೆ ಮಾಡಿದ್ದಾರೆ.  ಅಪ್ರಾಪ್ತೆ ಪ್ರೀತಿಸುತ್ತಿದ್ದವನ ಸ್ಥಿತಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹ ಯುವಕನ ಮನೆಯವರು ಹಿಂದೆ ಮುಂದೆ ನೋಡುತ್ತಿದ್ದಾರೆ.
ಕಳೆದ  2023ರ ಡಿಸೆಂಬರ್ ನಲ್ಲಿ ಚಳಿಗಾಲ ಅಧಿವೇಶನ ನಡೆಸಲು ಇಡೀ ಸರ್ಕಾರವೇ ಬೆಳಗಾವಿಯಲ್ಲಿತ್ತು. ಈ ಸಂದರ್ಭದಲ್ಲಿ ನಡೆಯಬಾರದ ಘಟನೆ ನಡೆದು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿತ್ತು. ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅದೊಬ್ಬ ಮಹಿಳೆಯ ಮಗ ಯುವತಿಯೊಬ್ಬಳ ಜೊತೆಗೆ ಓಡಿ ಹೋದ ಎನ್ನುವ ಕಾರಣಕ್ಕೆ ಆತನ ತಾಯಿಯನ್ನು ಮನೆ ಹೊಕ್ಕು ಬೆತ್ತಲೆ ಮಾಡಿ ಊರಲ್ಲಿ ಮೆರವಣಿಗೆ ಮಾಡಿ ಕಬಂಕ್ಕೆ ಕಟ್ಟಿ ಥಳಿಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೇ ವಂಟಮೂರಿ ಗ್ರಾಮದಲ್ಲಿ ಪ್ರೀತಿ ವಿಚಾರಕ್ಕೆ ಯುವಕನೊಬ್ಬನ ಮೇಲೆ ಹಲ್ಲೆಯಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಮಲಗಿದ ಯುವಕ ಸೌರಭ್ ದಾಧಾಗೋಳ ಎಂಬಾತನನ್ನ ಪೋನ್ ಮಾಡಿ ಕರೆಯಿಸಿಕೊಂಡು ಹೆದ್ದಾರಿಯಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
 ರಾತ್ರಿ ಯುವಕ ಸೌರಭ್ ಗೆ ಕರೆ ಮಾಡಿ ನಿನ್ನ ಜೊತೆಗೆ ಮಾತನಾಡುವುದಿದೆ ಬಾ ಎಂದು  ಕರೆಯಿಸಿಕೊಂಡ ಎಂಟು ಜನರ ಗುಂಪು ಹೆದ್ದಾರಿ ಪಕ್ಕದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಮ್ಮ ತಂಗಿಯ ಸಹವಾಸಕ್ಕೆ ಬಾರದಂತೆ ಎಚ್ಚರಿಕೆ ನೀಡಿ ಮೂರ್ಛೆ ಹೋಗಿದ್ದ ಸೌರಭ್ ಗೆ ಬಿಟ್ಟು ಹೋಗಿದ್ದಾರೆ. ಬಳಿಕ ಸ್ಥಳೀಯರು ಸೌರಭ್ ಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
22ವರ್ಷದ ಈ ಸೌರಭ್ ಸದ್ಯ ಎಸ್ಸೆಸ್ಸೆಲ್ಸಿ ಓದುತ್ತಿರುವ ಅಪ್ರಾಪ್ತೆಯನ್ನ ಆರು ವರ್ಷದಿಂದ ಪ್ರೀತಿ ಮಾಡುತ್ತಿದ್ದಾನಂತೆ. ಈ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾಗಿದೆ. ಆಗ ಹುಡುಗ ಸೌರಭ್ ನ ಕುಟುಂಬಸ್ಥರು ಮದುವೆ ಮಾಡಿಕೊಡುವಂತೆ ಕೇಳಿದ್ದಾರೆ. ಆದರೆ,  ಇದಕ್ಕೆ ಹುಡುಗಿ ಮನೆಯವರು ವಿರೋಧ ಮಾಡಿದ್ದಾರೆ. ಇದಾದ ಬಳಿಕ ಸೌರಭ್ ಗೆ ಬುದ್ದಿವಾದ ಹೇಳಿ ಆಕೆಯ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದರು.
ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಸೌರಭ್ ಗೆ ಕೆಲವೇ ದಿನಗಳಲ್ಲಿ ಮತ್ತೆ ಬಾಲಕಿಗೆ ಕರೆ ಮಾಡಿ ನಿನ್ನ ಜೊತೆಗೆ ಇರುತ್ತೇನೆ.  ನೀನೇ ಬೇಕು ಎಂದು ಹೇಳಿಕೊಂಡಿದ್ದಳು. ಇಬ್ಬರ ಪೋನ್ ನಲ್ಲಿ ಮಾತನಾಡುವುದು ಬಾಲಕಿ ಮನೆಯಲ್ಲಿ ಗೊತ್ತಾಗಿದೆ. ಈ ವೇಳೆ ಬಾಲಕಿಯ ಸಹೋದರರು ಸೌರಭ್ ಗೆ ಕರೆಯಿಸಿಕೊಂಡು ಹಿಗ್ಗಾಮಗ್ಗಾ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಒಟ್ಟಾರೆ, ಯುವತಿಯ ವಯಸ್ಸು ನೋಡದೇ ಅಪ್ರಾಪ್ತೆ ಬೆನ್ನು ಬಿದ್ದ ಯುವಕನಿಗೆ ಬಾಲಕಿ ಮನೆಯವರು ಹಲ್ಲೆ ಮಾಡಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನೊಂದು ಕಡೆ ಕೇಸ್ ಕೊಡಲು ಕೂಡ ಭಯ ಪಟ್ಟುಕೊಂಡಿರುವ ಸೌರಭ್ ಊರಿಗೆ ಹೋಗೊದು ಕೂಡ ಕಷ್ಟ ಆಗಿದೆ. ಸದ್ಯ ಪ್ರಕರಣದ ಮಾಹಿತಿ ಪಡೆದಿರುವ ಕಾಕತಿ ಠಾಣೆ ಪೊಲೀಸರು ದೂರು ನೀಡುವಂತೆ ಹೇಳಿದರೂ ಹಲ್ಲೆಗೊಳಗಾದ ಕುಟುಂಬಸ್ಥರು ಮುಂದೆ ಬಾರದಿದ್ದಕ್ಕೆ ದಿಕ್ಕೆ ತೋಚದ ಸ್ಥಿತಿಯಲ್ಲಿದ್ದಾರೆ.
Total Views 164
RELATED ARTICLES

Most Popular

Recent Comments

KNN City News
Home
E-Paper