
ಬೆಳಗಾವಿ
ರೈತನ ಜಮೀನಿನಲ್ಲಿ ಕಟ್ಟಿದ್ದ ಗೋವುಗಳನ್ನ ರಾತ್ರೋರಾತ್ರಿ ಕದ್ದು ಸಾಗಾಟ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.
ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಆಕಳುಗಳ ಕಳ್ಳತನ ಮಾಡಿದ್ದಾರೆ. ಜಮೀನಿನ ಶೆಡ್ ನಲ್ಲಿ ಕಟ್ಟಿದ್ದ ನಾಲ್ಕು ಜರ್ಸಿ ಆಕಳುಗಳು, ಒಂದು ಆಕಳಿನ ಕರು ಕಳ್ಳತನ ಮಾಡಿದ್ದಾರೆ.
ಅಪ್ಪನಿಲ್ಲ, ಗಂಡನಿಲ್ಲದ ಉಮಾಗೆ ಆಧಾರ ಸ್ತಂಭವಾಗಿದ್ದ ಆಕಳುಗಳು.ತಂದೆಯ ಆಸ್ತಿಯಲ್ಲಿ ಪಶುಪಾಲನೆ ಮಾಡುತ್ತ ಜೀವನ ಸಾಗಿಸುತ್ತಿದ್ದ ಉಮಾ ಆಕಳು ಕಳ್ಳತನ ಮಾಡಿ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ.
ಲಕ್ಷಾಂತರ ಮೌಲ್ಯದ ಆಕಳುಗಳು ಕಳ್ಳತನ ಮಾಡಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಬುಲೆರೋ ಪಿಕ್ಅಪ್ ವಾಹನದಲ್ಲಿ ಕದ್ದುಕೊಂಡು ಹೋಗಿದ್ದಾರೆ. ದನಗಳ ಕಳ್ಳತನ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಒಂದೂವಾರ ಕಳೆದರೂ ಇಲ್ಲಿಯವರೆ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ಉಮಾ ಆರೋಪಿಸಿದ್ದಾಳೆ.
