
ಬೆಳಗಾವಿ
ನಾನು ಮೊದಲಿನಿಂದಲೂ ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಸರಕಾರ ರಕ್ಷಣೆ ಮಾಡುವುದೊಂದೆ ನನ್ನ ಕೆಲಸ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಸೋಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲಿಂದಲೂ ಎಂತಹ ಸಂದರ್ಭದಲ್ಲಿ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಧರ್ಮಸಿಂಗ್ ಸರ್ಕಾರದಲ್ಲಿ ಧಮ್ ತಡೆದುಕೊಂಡು ತ್ಯಾಗ ಮಾಡಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲೂ ತ್ಯಾಗ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಮುಖ್ಯ, ಪಕ್ಷದಿಂದಲೇ ಬೆಳದವನು. ನಾನು ತ್ಯಾಗ ಮಾಡಿಕೊಂಡೇ ಬರುತ್ತಿದ್ದೇನೆ.ಇದರಿಂದ ಜನಕ್ಕೆ ಒಳ್ಳೆಯದಾಗುತ್ತೆ ಅಷ್ಟು ಸಾಕು ಎಂದರು.
ಸುರ್ಜೇವಾಲ ವಿರುದ್ಧ ಕ್ರಮಕ್ಕೆ ಕೆಲ ಸಚಿವರ ಒತ್ತಾಯ ವಿಚಾರಕ್ಕೆ ಉತ್ತರಿಸಿದ ಅವರು, ಕೆಲ ಮಾಧ್ಯಮಗಳಿಗೆ ಸುಳ್ಳು ಹೇಳಿ ಬಿಟ್ಟು ಇಡೀ ಮಾಧ್ಯಮದ ಇಮೇಜ್ ಹಾಳು ಮಾಡುತ್ತಿದ್ದಾರೆ. ನಿನ್ನೆ ನಮ್ಮ ಕಾಂಗ್ರೆಸ್ ಹಿರಿಯರ ಮನೆಗೆ ಭೇಟಿ ಮಾಡಿದ್ದೆ ಜಗಳ ಇತ್ತು ಅದಕ್ಕೆ ಹೋಗಿದ್ದೆ ಎಂದು ಕೆಲ ಮಾಧ್ಯಮದವರು ಸುದ್ದಿ ಮಾಡಿದ್ದಾರೆ. ಫಿರೋಜ್ ಸೇಠ್ ಹಿರಿಯ ನಾಯಕ ಜೊತೆಗೆ ಕೆಲಸ ಮಾಡಿದ್ದೇವೆ.
ಸಂಘಟನೆ ದೃಷ್ಟಿಯಿಂದ ಹೋಗಿ ಕುಳಿತುಕೊಂಡು ಬಂದಿದ್ದೆ ಅದನ್ನೇ ಸುಳ್ಳು ಸುದ್ದಿ ಮಾಡಿದರೆ ಹೇಗೆ ಎಂದು ಮಾಧ್ಯಮದವರ ಮೇಲೆಯೂ ಗರಂ ಆದರು.
ಸತೀಶ್ ಜಾರಕಿಹೊಳಿ ಅಂತಾ ಪ್ರಶ್ನೆ ಮಾಡ್ತಿದ್ದಂತೆ ಡಿಕೆಶಿ ಕೆಂಡಾಮಂಡಲವಾದರು. ಈ ಲೋಕಲ್ ಡರ್ಟಿ ಪಾಲಿಟಿಕ್ಸ್ ಮಾಡೋದಾದರೆ ನಾನು ಮಾತನಾಡುವುದಿಲ್ಲ.ನಾನು ಇದಕ್ಕೆ ಉತ್ತರ ಕೊಡಲ್ಲ, ಬರೋದು ಇಲ್ಲ. ನ್ಯಾಷ್ನಲ್ ಇವೆಂಟ್ ಮಾಡುತ್ತಿದ್ದೇನೆ. ನಿಮಗೂ ಬೆಸಿಕ್ ಕಾಮನ್ ಸೆನ್ಸ್ ಇರಬೇಕು. ಯಾರ್ಯಾರೋ ಎನೂ ಹೇಳ್ತಿದ್ದಾರೆ ಸುಳ್ಳಿನ ಕಂತೆ ಎಂದರು.
ಗಾಂಧಿ ಬಾವಿಯಿಂದ ನೀರು ತೆಗೆದು ಬೆಳಕು ಚೆಲ್ಲಿ ಇಲ್ಲಿಂದ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮಲ್ಲಿ ಯಾವ ಬಂಡಾಯನೂ ಇಲ್ಲ, ಯಾರ ಜೊತೆಗೆ ಭಿನ್ನಾಭಿಪ್ರಾಯ ಇಲ್ಲ. ಪೊಲಿಟಿಕಲ್ ಡಿಪ್ರೆನ್ಸ್, ಪರ್ಸನಲ್ ಭಿನ್ನಾಭಿಪ್ರಾಯ ಯಾವುದು ಇಲ್ಲಾ. ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಲ್ಲರೂ ಒಂದೇ. ನನ್ನ ಕಣ್ಣು, ಕಿವಿ ಸರಿಸಮಾನಾವಾಗಿ ನೋಡುತ್ತೆ. ನಾನು ದೊಡ್ಡ ಸ್ಥಾನದಲ್ಲಿದ್ದೇನೆ ಅದ್ಯಕ್ಷ ಇದೀನಿ ನನ್ನ ಕಣ್ಣಲ್ಲಿ ಎಲ್ಲರೂ ಒಂದೇ. ನನಗೆ ಯಾವನ ಬಂಡಾಯ ಇಲ್ಲ.ನಾನುಂಟು, ಹೈಕಮಾಂಡ್ ಉಂಟು ಪಕ್ಷ ಉಂಟು ಎಂದರು.
ಯಾವುದಕ್ಕೂ ನನ್ನ ಹೆಸರು ಉಪಯೋಗಿಸಲು ಹೋಗಬೇಡಿ. ನನಗೆ ಯಾರ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕರ್ತರು ಅಂದ್ರೇ ಎಲ್ಲರೂ ಒಂದೇ.ಕ್ಯಾಬಿನೆಟ್ ಸಚಿವರು ಅಂದ್ರೇ, ಶಾಸಕರು ಅಂದ್ರೇ ಎಲ್ಲರೂ ಒಂದೇ. ಯಾರು ನನ್ನ ಪಕ್ಷದ ಜೊತೆಗೆ ಕೆಲಸ ಮಾಡ್ತಾರೆ ಎಲ್ಲರೂ ಒಂದೇ. ನಾನೇ ಅವರಿಗೆ ತಲೆ ಬಾಗಿಸಿ ಸರ್ವಿಸ್ ಮಾಡುವೆ.ಪಕ್ಷ ಮುಖ್ಯ ನನಗೆ ಕೊಟ್ಟಿರುವ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎಂದರು.
