Monday, November 23, 2026
HomeBelagaviಒಕ್ಕುಂದ ಉತ್ಸವಕ್ಕೆ ಡಿಸಿಗೆ ಆಹ್ವಾನ

ಒಕ್ಕುಂದ ಉತ್ಸವಕ್ಕೆ ಡಿಸಿಗೆ ಆಹ್ವಾನ

ಬೆಳಗಾವಿ
ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ಫೆ.1ರಂದು ಹಮ್ಮಿಕೊಂಡಿರುವ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಗುರುವಾರ ಭೇಟಿಯಾದ ಗ್ರಾಮಸ್ಥರು ಆಹ್ವಾನ ಪತ್ರಿಕೆ ನೀಡಿದರು.

ಐತಿಹಾಸಿಕವಾಗಿ ಹಲವು ಪ್ರತೀತಿ ಹೊಂದಿರುವ ಒಕ್ಕುಂದ ಗ್ರಾಮದಲ್ಲಿ 2016ರಿಂದ ಪ್ರತಿವರ್ಷ ಉತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಹಾಗಾಗಿ, ಈ ಬಾರಿ 10ನೇ ವರ್ಷದ ಉತ್ಸವಕ್ಕೆ ಸರ್ಕಾರದಿಂದ ಧನಸಹಾಯ ನೀಡುವಂತೆ ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಅದೇ ರೀತಿ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ತಾವು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಗ್ರಾಮಸ್ಥರು ಕೋರಿದರು.

ಈ ವೇಳೆ ಮಾತನಾಡಿದ ಚಲನಚಿತ್ರನಟ ಸಿ.ಕೆ.ಮೆಕ್ಕೇದ, ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಒಳ್ಳೆಯ ರೀತಿ ಸ್ಪಂದಿಸಿದ್ದು, ನಮ್ಮೂರಿನ ಉತ್ಸವಕ್ಕೆ 2 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಈ ವೇಳೆ ಒಕ್ಕುಂದ ಗ್ರಾಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ,
ಪ್ರಾಚಾರ್ಯ ಡಾ‌.ಸಿ.ಬಿ.ಗಣಾಚಾರಿ, ಉತ್ಸವ ಸಮಿತಿ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಭದ್ರಶೆಟ್ಟಿ, ಖಜಾಂಚಿ ಪರ್ವತಗೌಡ ಪಾಟೀಲ, ಪದಾಧಿಕಾರಿಗಳಾದ ಬಸನಗೌಡ ಪೊಲೀಸ್ ಪಾಟೀಲ, ಗಜದಂಡ ಸುತಗಟ್ಟಿ, ಮಡಿವಾಳಪ್ಪ ತಡಸಲ್ ಇದ್ದರು.

Total Views 101
RELATED ARTICLES

Most Popular

Recent Comments

KNN City News
Home
E-Paper