Monday, November 23, 2026
HomeBelagaviಓವರ್ ಬ್ರಿಡ್ಜ್ ಗೆ ಸ್ಥಳೀಯ ಬಿಜೆಪಿ ಪ್ರಬಲ ನಾಯಕ ವಿರೋಧ ಮಾಡಿದ್ದಾರೆ: ಸಚಿವ ಸತೀಶ್

ಓವರ್ ಬ್ರಿಡ್ಜ್ ಗೆ ಸ್ಥಳೀಯ ಬಿಜೆಪಿ ಪ್ರಬಲ ನಾಯಕ ವಿರೋಧ ಮಾಡಿದ್ದಾರೆ: ಸಚಿವ ಸತೀಶ್

ಬೆಳಗಾವಿ
ನಗರದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಸ್ಥಳೀಯ ಬಿಜೆಪಿ ನಾಯಕರ ವಿರೋಧದಿಂದ ಅದು ನನೆಗುದಿಗೆ ಬಿದ್ದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಭಾನುವಾರ 76ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೆರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಸ್ಥಳೀಯ ಪ್ರಬಲ ಬಿಜೆಪಿ ನಾಯಕರು ವಿರೋಧ ಮಾಡಿದ್ದಾರೆ. ನಾವು ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಕೇಂದ್ರ ರಾಷ್ಟ್ರೀಯ ಹೆದ್ದಾರಿ‌ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಗೆ ಬಂದಾಗ ಘೋಷಣೆ ಮಾಡಿದ್ದರು. ಈಗ ನಾವು ಪದೇ ಪದೇ ಅವರಿಗೆ ಮನವಿ ಮಾಡಲು ಬರುವುದಿಲ್ಲ. ಅದು ಅವರ ನಾಯಕರಿಗೆ ಬಿಟ್ಟ ವಿಷಯ. ಆದರೆ. ರಾಜ್ಯ ಸರಕಾರದಿಂದ ಓವರ್ ಬ್ರಿಡ್ಜ್ ಗೆ ನಿರ್ಮಾಣ‌ ಮಾಡಲು ಶ್ರಮಿಸಲಾಗುವುದು ಎಂದರು.
ಹೊಸ ಬಡಾವಣೆಯನ್ನು ಸರಕಾರದಿಂದ ಮಾಡುವುದು ಬಹಳ‌ ಕಷ್ಟ ಇದೆ. ಖಾಸಗಿ ಅವರು ಕಾನೂನಾತ್ಮಕವಾಗಿ ಬಡಾವಣೆ ಮಾಡುವವರಿಗೆ ಸಹಕಾರ ಕೊಡುವುದು ಉತ್ತಮ. ಕಳೆದ 10 ವರ್ಷಗಳಿಂದ ಕಣಬರಗಿಯಲ್ಲಿನ ಬಡಾವಣೆ ‌ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಗ್ಯಾರಂಟಿ ಯೋಜನೆಯಿಂದ ತೆರಿಗೆ ಹೆಚ್ಚಳ ಯಾವುದೂ ಮಾಡಿಲ್ಲ. ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವುದು ಬಿಟ್ಟರೆ ಯಾವುದೇ ತೆರಿಗೆ ಹೆಚ್ಚಳ ಮಾಡಿಲ್ಲ. ಬೇರೆ ರಾಜ್ಯದಲ್ಲಿ ನೋಡಿದರೆ ನಮ್ಮ ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ಕಡಿಮೆ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬೆಳಗಾವಿ ಎಪಿಎಂಸಿಯನ್ನು ಮೊದಲಿನ ತರಹ ಕಾರ್ಯನಿರ್ವಹಿಸಬೇಕು. ಹಾಗೂ ಖಾಸಗಿ ತರಕಾರಿ ಮಾರುಕಟ್ಟೆಯೂ ಸರಳವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ‌ಇನ್ನೊಂದು ಬಾರಿ ಸಭೆ ನಡೆಸಲಾಗುವುದು ಎಂದರು.
ಮೈಕ್ರೋ ಫೈನಾನ್ಸ್ ಹಾವಳಿಯ ಬಗ್ಗೆ ಪ್ರಾಥಮಿಕವಾಗಿ ಪೊಲೀಸರು ತನಿಖೆ ನಡೆಸಬೇಕು. ಯಮಕನಮರಡಿ, ಗೋಕಾಕ ಹಾಗೂ ಹುಕ್ಕೇರಿಯಲ್ಲಿ ಸಾಕಷ್ಟು ಜನ ಮೈಕ್ರೋ ಫೈನಾನ್ಸ್ ದವರು ಕಿರುಕುಳ ನೀಡಿದ್ದಾರೆ. ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರ. ಜರುಗಿಸಲಾಗುವುದು. ಈಗಾಗಲೇ ಸಿಎಂ ಅವರು ಮೈಕ್ರೋ ಫೈನಾನ್ಸ್ ಬಗ್ಗೆ ಕಾನೂನು ಜಾರಿಗೆ ತಂದಿದ್ದಾರೆ ಎಂದರು.

Total Views 198
RELATED ARTICLES

Most Popular

Recent Comments

KNN City News
Home
E-Paper