
ಬೆಳಗಾವಿ
ಬೆಳಗಾವಿ ನಗರದ ರವಿವಾರ ಪೇಟೆಯ ಪಾಟೀಲ್ ಮಾಳದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರಾತ್ರಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅನಿಲ್ ದಾಮಣೆಕರ್ (43) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಬಿಮ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ಅನಿಲ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.ಬಜಾಗ ವಿಚಾರದಲ್ಲಿ ಅಣ್ಣನ ಮಗನಿಂದ ಹಲ್ಲೆ ಮಾಡಿ ಚಾಕು ಹಾಕಿದ್ದಾನೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
