Monday, November 23, 2026
HomeBelagaviಸಂಪಗಾಂವನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನ

ಸಂಪಗಾಂವನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಜನ

ಬೆಳಗಾವಿ
ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದ ಸುತ್ತ ಮುತ್ತಲಿನ ಪ್ರದೇಶದ ಜಮೀನಿನಲ್ಲಿ ಚಿರತೆ ಪ್ರತ್ಯೇಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಸಂಪಗಾಂವ ಮತ್ತು ಪಟ್ಟಿಹಾಳ ಗ್ರಾಮಗಳಲ್ಲಿ ಚಿರತೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಸಂಪಗಾವ ಬಳಿ ಒಂದು ನಾಯಿ ಮತ್ತು ನರಿಯನ್ನು ಭೇಟೆಯಾಡಿದೆ ಎಂದು ತಿಳಿದು ಬಂದಿದೆ. ಚಿರತೆಯ ಚಲನವಲನಗಳು ‌ಅರಣ್ಯ ಇಲಾಖೆಯ ಅಧಿಕಾರಿಗಳು ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ವಿವಿಧ ಕಡೆಗಳಲ್ಲಿ ಬೋನ್ ಹಾಕಿದ್ದಾರೆ. ಸಂಜೆಯಾಗುತ್ತಿದ್ದಂತೆ ಸಂಪಗಾಂವ ಮತ್ತು ಸುತ್ತಮುತ್ತಲಿನ ಜನರು ಒಬ್ಬೊಬ್ಬರೆ ಸಂಚಾರ ನಡೆಸದಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

Total Views 486
RELATED ARTICLES

Most Popular

Recent Comments

KNN City News
Home
E-Paper