Monday, November 23, 2026
HomeBelagaviನರೇಗಾ ಬಾಕಿ ಸಂಬಳ ನೀಡುವಂತೆ ಪ್ರತಿಭಟನೆ

ನರೇಗಾ ಬಾಕಿ ಸಂಬಳ ನೀಡುವಂತೆ ಪ್ರತಿಭಟನೆ

ಬೆಳಗಾವಿ
ಮಹಾತ್ಮ ಗಾಂಧೀಜಿ ನರೇಗಾ ಯೋಜನೆ ಅಡಿಯಲ್ಲಿ ಸುಮಾರು ಮೂರು ವರ್ಷಗಳಿಂದ ಮೇಲೆ ರಿಜಿಸ್ಟ್ರೇಷನ್ ಮಾಡದೇ ಇರುವುದು ಹಾಗೂ ಬಾಕಿ ಸಂಬಳವನ್ನು ಕೊಡದೆ ವಂಚಿಸಿರುವ ಬಗ್ಗೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮರೆತು ಕಾನೂನು ಉಲ್ಲಂಘನೆ ಮಾಡಿರುವ ನರೇಗಾ ಸಿಬ್ಬಂದಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿ‌ಪಂ ಸಿಇಓಗೆ ಮನವಿ ಸಲ್ಲಿಸಿದರು.
ಕಳೆದ ಮೂರು ವರ್ಷಗಳಿಂದ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಕರ್ತವ್ಯ ನಿಷ್ಠೆಯಲ್ಲಿ ಕೆಲಸ ಮಾಡಿರುತ್ತೇವೆ. ನಮಗೆ ಮೆಟ್ಟಿ ರಿಜಿಸ್ಟ್ರೇಷನ್ ಮಾಡಿ ಕೊಡದೇ, ಮೇಟಿ ಸರ್ಟಿಫಿಕೇಟ್ ಕೊಡದೆ, ಮೇಟಿಗೆ ನಿಗದಿಪಡಿಸಿರುವ ಸಂಬಳ ಕೊಡದೆ ವಂಚಿಸುತ್ತಿರುವುದು ಮನವಿಯಲ್ಲಿ ಖಂಡಿಸಿದ್ದಾರೆ‌.
ಕೂಲಿ ಕಾರ್ಮಿಕರಿಗೆ ಹಾಗೂ ನನಗೆ ನನ್ನ ಸರ್ಕಾರಿ ಸೌಲಭ್ಯ ಪಡೆಯಲು ಮಾರ್ಗದರ್ಶನ ಹಾಗೂ ಸಹಾಯ ಮಾಡದೆ ದೋಸ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿ, ಕಾನೂನು ಉಲ್ಲಂಘನೆ ಮಾಡಿರುವ ನಿಮ್ಮ ನರೇಗಾ ಸಿಬ್ಬಂದಿಯ ಮೇಲೆ ಈ ಕೂಡಲೇ ಕಾನೂನು ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಕುಂತಲಾ ಮೇಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 113
RELATED ARTICLES

Most Popular

Recent Comments

KNN City News
Home
E-Paper