
ಬೆಳಗಾವಿ
ಭಜರಂಗದಳದ ಕಾರ್ಯಕರ್ತರ ಮೇಲೆ ವಿನಾಕಾರಣ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿರುವುದನ್ನು ಖಂಡಿಸಿ ಶನಿವಾರ ರಾತ್ರಿ ಭಜರಂಗದಳದ ಕಾರ್ಯಕರ್ತರು ಶಹಾಪುರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು .
ಬೆಳಗಾವಿ ನಗರದ ಅಶ್ವತ್ಥಾಮ ಮಂದಿರ ಮೇಲೆ ಕಲ್ಲು ಎಸೆತದ ಬಗ್ಗೆ ಪೊಲೀಸ ಕಮಿಷನರ್ ಮನವಿ ಸಲ್ಲಿಸಿದ್ದರು.ಅದೇ ಉದ್ದೇಶ ಇಟ್ಟುಕೊಂಡು ಭಜರಂಗದಳ ಇಬ್ಬರು ಕಾರ್ಯಕರ್ತರ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ದೇಶದ ಪರವಾಗಿ ಭಜರಂಗದಳ ಕಾರ್ಯಕರ್ತರು ಕೆಲಸ ಮಾಡುತ್ತಿದೆ. ಗೂಂಡಾ ಕಾಯ್ದೆ ಹಾಕಬೇಕಾದರೆ ಲೂಟಿ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಲಿ. ಆದರೇ ದೇಶದ ಪರವಾಗಿ ಕೆಲಸ ಮಾಡೋ ನಮ್ಮ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಗಡಿಪಾರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಹಾಪೂರ ಠಾಣಾ ವ್ಯಾಪ್ತಿಯ ಶ್ರೀರಾಮ ಕೋಟೆ, ಮನೋಜ ಹಲಗೇಕರ್ ಎಂಬುವವರು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುವ ಹುನ್ನಾರ ನಡೆಸಿದ್ದಾರೆ ಎಂದರು.
