Monday, November 23, 2026
HomeBelagaviಅಶ್ವಥಾಮ ದೇವಾಲಯಕ್ಕೆ ಮತ್ತೆ ಕಲ್ಲು ಎಸೆದ ಯಾಸೀರ್

ಅಶ್ವಥಾಮ ದೇವಾಲಯಕ್ಕೆ ಮತ್ತೆ ಕಲ್ಲು ಎಸೆದ ಯಾಸೀರ್

ಬೆಳಗಾವಿ
ಮಾನಸಿಕ ಅಸ್ವಸ್ಥ ಅನ್ಯಕೋಮಿನ ಯುವಕನಿಂದ ದೇವಾಲಯದ ಮೇಲೆ‌ ಕಲ್ಲು ಎಸೆದು ಹಿನ್ನೆಲೆಯಲ್ಲಿ ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಪಾಂಗುಳಗಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನಕ್ಕೆ ಕಲ್ಲು ಎಸೆದ ಉಜ್ವಲ್ ನಗರದ ನಿವಾಸಿ ಯಾಸೀರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿವಾರಣೆ ನಡೆಸಿದ್ದಾರೆ.
ಕಳೆದ ಮಾ‌ 19ರಂದು ಕೂಡ ಕಲ್ಲು ಎಸೆದಿದ್ದ ಯಾಸೀರ್. ಈ ವೇಳೆ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದ ಪೊಲೀಸರು. ಜೈಲಿನಿಂದ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದ ಯಾಸೀರ್ ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದು ಮತ್ತೆ ದೇವಸ್ಥಾನಕ್ಕೆ ಕಲ್ಲು ಎಸೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಧರ್ಮದ ಏಟು ನೀಡಿ ಮತ್ತೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Total Views 104
RELATED ARTICLES

Most Popular

Recent Comments

KNN City News
Home
E-Paper