
ಬೆಳಗಾವಿ
ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ಲಾಂಗು ಮಚ್ಚು ಪ್ರದರ್ಶನ ಮಾಡಿ ತಡೆಯಲು ಬಂದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗುರ್ಲಾಪುರ ಗ್ರಾಮದ ಕೆಲ ಯುವಕರಿಂದ ರೌಡಿಸಂ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಮತ್ತು ಗುರ್ಲಾಪುರ ಗ್ರಾಮದ ಯುವಕರ ಮೇಲೆ ಅಟ್ಯಾಕ್ ಮಾಡಲು ಬಂದಿದ್ದ ಗ್ಯಾಂಗ್ ನಿಂದ
ಮಚ್ಚು ಲಾಂಗು ಪ್ರದರ್ಶನ ಮಾಡ್ತಿದ್ದನ್ನ ಕಂಡು ಯುವಕರ ಗ್ಯಾಂಗ್ ನ್ನು ಗ್ರಾಮಸ್ಥರು ತಡೆದಿದ್ದಾರೆ. ಈ ವೇಳೆ ಗ್ರಾಮಸ್ಥರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಘಟನೆ ಮುನ್ನ ಮಾಹಿತಿ ನೀಡಿದ್ರೂ ಮೂಡಲಗಿ ಪೊಲೀಸರ ನಿರ್ಲಕ್ಷ್ಯವಹಿಸಿದ್ದಾರೆ.
ಪೊಲೀಸರ ಭಯವೇ ಇಲ್ಲದೇ ಪಕ್ಕದ ಊರಿಗೆ ಬಂದು ದಾದಾಗಿರಿ ಮಾಡಿದ ಹತ್ತಕ್ಕೂ ಅಧಿಕ ಯುವಕರು. ಗ್ರಾಮಸ್ಥರು ಜೀವ ಪಣಕ್ಕಿಟ್ಟು ಇಬ್ಬರನ್ನು ಹಿಡಿದು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಗಲಾಟೆ ಬಳಿಕ ಬಂದು ಗ್ರಾಮದಲ್ಲಿ ಪೊಲೀಸರ ರೌಂಡ್ಸ್ ಹಾಕಿದ್ದು, ದಾದಾಗಿರಿ ಮಾಡಿದ ಯುವಕರ ವಿರುದ್ಧ ಕ್ರಮಕ್ಕೆ ಹಳ್ಳೂರ ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
