Monday, November 23, 2026
HomeBelagaviನಿಡಸೋಸಿ ಜಗದ್ಗುರುಗಳಿಗೆ ಗೌರವ ಡಾಕ್ಟರೇಟ್: ಅಭಿನಂದಿಸಿದ ಬೆಳಗಾವಿ ಹುಕ್ಕೇರಿ ಶ್ರೀಗಳು

ನಿಡಸೋಸಿ ಜಗದ್ಗುರುಗಳಿಗೆ ಗೌರವ ಡಾಕ್ಟರೇಟ್: ಅಭಿನಂದಿಸಿದ ಬೆಳಗಾವಿ ಹುಕ್ಕೇರಿ ಶ್ರೀಗಳು

ಬೆಳಗಾವಿ
ನಿಡಸೋಸಿ ಸಿದ್ಧ ಸಂಸ್ಥಾನ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿರುವುದಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ಹಿರೇಮಠದ ಗೌರವ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ನಮ್ಮ ಭಾಗದ ಪ್ರತಿಷ್ಠಿತ ಮಠ ನಿಡಸೋಸಿಯ ಸಿದ್ಧಸಂಸ್ಥಾನ ಮಠ. ನಿಡಸೋಸಿಯ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದು ಇಡೀ ಜಿಲ್ಲೆಗೆ ಸಂತೋಷ ತಂದಿದೆ ಎಂದರು.
ದಕ್ಷಿಣ ಭಾಗದಲ್ಲಿ ಸಿದ್ಧಗಂಗಾ ಮಠ, ಸುತ್ತೂರು ಮಠದಂತೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಮಠ ಎಂದರೆ ‌ನಿಡಸೋಸಿಯ ಸಿದ್ಧ ಸಂಸ್ಥಾನಮಠ. ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು ಎಲ್ಲ ಸಮಾಜದವರೊಂದಿಗೆ ಬೇರೆತು ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರಿಗೆ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಗೌರವ ಸನ್ಮಾನ ಮಾಡಿ ಸಂತಸ ಪಟ್ಟಿದ್ದೇವೆ ಎಂದರು.
ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಾತನಾಡಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ನಮ್ಮ ತಾಲೂಕಿನವರು ಎಂ.ಚಂದರಗಿ ಗ್ರಾಮದವರು ಇವತ್ತು ‌ಹುಕ್ಕೇರಿಯಲ್ಲಿ ಬಹಳಷ್ಟು ಕಾರ್ಯ ಮಾಡಿದ್ದಾರೆ. ನಿಡಸೋಸಿ ಜಗದ್ಗುರುಗಳನ್ನು ಅಭಿನಂದಿಸುವ ಅಪರೂಪದ ಗಳಿಗೆ ನನಗೆ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.
ಗುರುಮಿಟ್ಕಲ್ ಶಾಸಕ ಶರಣಗೌಡ ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿಯಾಗಿದೆ ಎಂದರೆ ಅದು ಮಠ,‌ಮಾನ್ಯಗಳಿಂದ ನಿಡಸೋಸಿ ಜಗದ್ಗುರುಗಳಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ ಎಂದರು.

Total Views 60
RELATED ARTICLES

Most Popular

Recent Comments

KNN City News
Home
E-Paper