Monday, November 23, 2026
HomeBelagaviಏ.16ಕ್ಕೆ ಬೆಳಗಾವಿಯಲ್ಲಿ ಜನಾಕ್ರೋಶ ಆಂದೋಲನ: ರವಿಕುಮಾರ

ಏ.16ಕ್ಕೆ ಬೆಳಗಾವಿಯಲ್ಲಿ ಜನಾಕ್ರೋಶ ಆಂದೋಲನ: ರವಿಕುಮಾರ

ಬೆಳಗಾವಿ
ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪೋಟಕ ಹೇಳಿಕೆ ನೀಡಿ ಸತ್ಯ ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ತಿನ ಸದಸ್ಯ ಎನ್.ರವಿಕುಮಾರ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿ ಸರಕಾರದ ಭ್ರಷ್ಟಾಚಾರ ತೋರಿಸಿದ್ದಾರೆ ಎಂದರು.
ರಾಜ್ಯಾದ್ಯಂತ ಜಾತಿ ಗಣತಿಯ ಸದ್ದು ಮಾಡುತ್ತಿದೆ. ಜಾತಿ ಗಣತಿ ಜಾರಿಗೊಳಿಸುವ ಬಗ್ಗೆ ಸಿಎಂ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.

ಈಗಿನ ಪ್ರಕಾರ ಅನೇಕ ಮನೆಗಳಿಗೆ ಹೋಗಿಲ್ಲ. ಸಾಮ
ಜಾತಿಗಣತಿಯ ಸರ್ವೆ ಬಗ್ಗೆ ಸರಕಾರದಲ್ಲಿನ ಶಾಸಕರೇ ಅಪಸ್ವರ ಎತ್ತಿದ್ದಾರೆ. ಒಂದು ವಾರಗಳ ಕಾಲ ಸನದ ಕರೆಯಿರಿ ವಿಸ್ತ್ರತವಾದ ಚರ್ಚೆ ನಡೆಸೋಣ ಎಂದರು.

ರಾಜ್ಯದಲ್ಲಿ ಸಾಕಷ್ಟು ಬೆಲೆ ಏರಿಕೆ ದಾಳಿ ನಡೆಯುತ್ತಿವೆ. ಹಾಲಿನ ದರ ವರ್ಷದಲ್ಲಿ ನಾಲ್ಕು ಬಾರಿ ಏರಿಕೆ ಮಾಡಿದ್ದಾರೆ‌. ಒಂದು ಲೀಟರ್ ಹಾಲಿಗೆ 9 ರೂ. ಹೆಚ್ಚಿಗೆ ಮಾಡಿದ್ದಾರೆ. ಅಲ್ಲದೆ, ಡಿಸೇಲ್, ಪೆಟ್ರೋಲ್ ದರ ಹೆಚ್ಚಳ ಮಾಡಿದ್ದಾರೆ. ಇದರ ಜೊತೆಗೆ ಕಸ ಹಾಗೂ ನೀರಿನ ದರವೂ ಏರಿಕೆ ಮಾಡಿದ ಶ್ರೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಸರಕಾರಕ್ಕೆ ಒಂದಿಷ್ಟು ಸಿಂಪತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಈ ಸರಕಾರದಲ್ಲಿ ಬೆಲೆ ಏರಿಕೆ ದಾಳಿ ಮಾಡಿ, ಮುದ್ರಾಂಕ ಶುಲ್ಕ ಸೇರಿದಂತೆ 48 ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ ಎಂದು ಹರಿಹಾಯ್ದರು.
ಎಸ್ ಸಿ, ಎಸ್ ಟಿ ಹಣ ಲೂಟಿ ಮಾಡುತ್ತಿದ್ದಾರೆ. 39 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದಾರೆ. ಎಸ್ ಟಿ, ಎಸ್ ಸಿ ಸಮುದಾಯದ ಅಭಿವೃದ್ಧಿ ಬಗ್ಗೆ ಇಡಬೇಕಾದ ಹಣ ಲೂಟಿ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡಲು ಮುಸ್ಲಿಮ್ ಸಮುದಾಯ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ಹಣ ಕೊಡುತ್ತಿದ್ದಾರೆ. ನಮ್ಮ ಹಿಂದು ವಿದ್ಯಾರ್ಥಿಗಳಿಗೆ ನಯಾಪೈಸೆ ಕೊಡುವುದಿಲ್ಲ. ಮಸೀದಿಯಲ್ಲಿ ನಮಾಜ್ ಮಾಡುವವರಿಗೆ 6 ಸಾವಿರ ರೂ. ಹಣ ಕೊಡುವ ಸರಕಾರ ಹಿಂದು ದೇವಸ್ಥಾನದ ಪೂಜಾರಿಗಳಿಗೆ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದರು.
ಏ.16 ರಂದು ಬಿಜೆಪಿಯ ಜನಾಕ್ರೋಶ ಯಾತ್ರೆಯನ್ನು ಬೆಳಗಾವಿಯಲ್ಲಿ ನಡೆಸಲಾಗುವುದು ಎಂದರು.
ಮಾಜಿ ಶಾಸಕ ವಿ.ಐ.ಪಾಟೀಲ್, ಮುರುಗೇಂದ್ರಗೌಡ ಪಾಟೀಲ್ ಇದ್ದರು.

Total Views 95
RELATED ARTICLES

Most Popular

Recent Comments

KNN City News
Home
E-Paper