
ಚನ್ನಮ್ಮನ ಕಿತ್ತೂರು
ಸ್ಥಳೀಯ ಗದ್ದಿಓಣಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ನೊಂದಣಿಯಾದ ಶ್ರೀವಿಠ್ಠಲ ದೇವರ ದೇವಸ್ಥಾನಕ್ಕೆ ಕಿತ್ತೂರು ತಹಶೀಲ್ದಾರ ರವೀಂದ್ರ ಹಾದಿಮನಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಸುಮಾರು ವರ್ಷಕ್ಕೆ 20 ಲಕ್ಷ ರೂಪಾಯಿ ಆದಾಯವುಳ್ಳ ಟ್ರಸ್ಟ್ ಕಮಿಟಿಗೆ ಹೈಕೋರ್ಟಿನ ಆದೇಶದಿಂದಾಗಿ ಅನಧಿಕೃತ ಕಮಿಟಿಯನ್ನು ರದ್ದುಪಡಿಸಿದರಿಂದ ಬೆಳಗಾವಿ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ನೇಮಿಸಿದ ಹಿನ್ನೆಲೆಯಲ್ಲಿ ಇಂದು ಅಧಿಕಾರ ಸ್ವೀಕಾರ ಮಾಡಿದರು. ಬೆಳ್ಳಿ ಬಂಗಾರ ಒಡವೆ ಅದಕ್ಕೆ ಸಂಬಂಧಪಟ್ಟ ಎಲ್ಲ ಆಸ್ತಿಗಳನ್ನು 28ನೇ ತಾರೀಕಿಗೆ ಕಾನೂನು ಪ್ರಕಾರ ನನಗೆ ಒಪ್ಪಿಸಬೇಕೆಂದು ಸೂಚಿಸಿದರು. ಪ್ರತಿ ವರ್ಷ ಬರುತ್ತಿದ್ದ ಸುಮಾರು 11 ಲಕ್ಷ ಮಳೆಗೆಗಳಿಂದ ಬಾಡಿಗೆ ಬಂದ ಹಣವನ್ನು ಲಿಸ್ಟಿನಲ್ಲಿ ಮರೆಮಾಚಿದ್ದರು ತಕ್ಷಣ ಹನುಮಂತು ಕೊಟಬಾಗಿಯವರು ಇದರಲ್ಲಿ ಮಳಿಗೆಗಳನ್ನು ಬರೆದಿಲ್ಲ ತಕ್ಷಣ ಬರೆಯಿರಿ ಅದರ ಆದಾಯವನ್ನು ತಿಳಿಸಿರಿ ಎಂದು ಹೇಳಿದರು. ತಕ್ಷಣ ತಹಶೀಲ್ದಾರರು ಎಷ್ಟು ಮಳಿಗೆಗಳಿವೆ ಅದರಿಂದ ಆದಾಯ ಎಷ್ಟು ಎಂದು ನೇರವಾಗಿ ಕೇಳಿದ ತಕ್ಷಣ ವರ್ಷಕ್ಕೆ 11 ಲಕ್ಷ ಆದಾಯವಿದೆ ಮಳಿಗೆಗಳಿಂದ ಎಂದು ಹಂಗಾಮಿ ಕಾರ್ಯದರ್ಶಿ ಪ್ರಹ್ಲಾದ ಶಿಗ್ಗಾವಿ. ಉತ್ತರಿಸಿದರು ತಹಶೀಲ್ದಾರರು ಕಾರವಾಗಿ ಎಷ್ಟು ಆಸ್ತಿ ಇದೆ, ಎಷ್ಟು ಇದೆ ಹೇಳಲೇಬೇಕು ಮರೆಮಾಚುವಂತಿಲ್ಲ ಇದು ಸರಕಾರದ ಆದೇಶ ಪಾಲಿಸಲೇಬೇಕು. ಕೈಗಡವಾಗಿ ಐವತ್ತು ನಾಲ್ಕು ಸಾವಿರ ರೂಪಾಯಿ ಹಣವನ್ನು ಯಾಕೆ ಇಟ್ಟುಕೊಂಡಿದ್ದೀರಿ ತಕ್ಷಣ ಅದನ್ನ ಜಮಾ ಮಾಡಿ ಇಲ್ಲವೇ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಖಾರವಾಗಿ ತಿಳಿಸಿದರು. ಇದು ಸಾರ್ವಜನಿಕ ಹಣ ಇದನ್ನ ಯಾಕೆ ಇಟ್ಟುಕೊಂಡಿದ್ದೀರಿ ಬಾಡಿಗೆ ಕೈಯಲ್ಲಿ ಯಾಕೆ ಇಸ್ಕೊಂಡಿದ್ದೀರಿ ಚಕ್ಕ ಮುಖಾಂತರ ಸಂದಾಯ ಮಾಡಬೇಕಿತ್ತು ಬಾಡಿಗೆದಾರರು ಅವರ ಮೇಲೆ ಒತ್ತಡ ತಕೊಂಡು ಲಕ್ಷಗಟ್ಟಲೆ ಕೈಗಡ ಯಾಕೆ ಇಸಿಕೊಂಡಿದ್ದೀರಿ. ತಕ್ಷಣ ಅದನ್ನು ಬ್ಯಾಂಕಿಗೆ ತುಂಬಿ ಇಲ್ಲವಾದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು ದೇವಸ್ಥಾನ ಟ್ರಸ್ಟಿನ ಎಲ್ಲ ಬಾಡಿ ದಾರಿಗೆ ವಿನಂತಿ ಮಾಡಿ ಯಾರ ಕೈಯಲ್ಲಿ ಹಣ ಕೊಡಬೇಡಿ ಬ್ಯಾಂಕಿನ ಅಕೌಂಟಿಗೆ ತುಂಬಿ ಎಂದು ಸ್ಪಷ್ಟವಾಗಿ ತಿಳಿಸಿದರು. ಬಾಡಿಗೆದಾರರಿಗೆ ನೀವು ಯಾರ ಕೈಯಲ್ಲಿ ದುಡ್ಡು ಕೊಟ್ಟಿದ್ದೀರ ಅದನ್ನ ಅವರ ಕಡೆಯಿಂದ ಹಿಂಪಡೆದು ತಕ್ಷಣ ಬ್ಯಾಂಕಿನ ಅಕೌಂಟಿಗೆ ತುಂಬಿ ಎಂದು ತಿಳಿಸಿದರು ಬರುವ 28ರೊಳಗೆ ಟ್ರಸ್ಟಿನ ಬಾಕಿ ಇರುವ ಅಂಗಡಿಕಾರರ ಹಣವನ್ನ ವಸೂಲ್ ಮಾಡಿ ತಕ್ಷಣ ಬ್ಯಾಂಕಿಗೆ ತುಂಬಬೇಕು ಈ ವರ್ಷವೂ ಸಹಿತ 10% ಹೆಚ್ಚಿಗೆ ಮಾಡಿರುವ ಹಣವನ್ನು ಬಾಡಿಗೆದಾರರು ತುಂಬಿಲ್ಲ ಅದನ್ನು ಸಹಿತ ವಸೂಲ್ ಮಾಡಿ ಬ್ಯಾಂಕಿಗೆ ಕಟ್ಟಿ 28ನೇ ತಾರೀಕಿಗೆ ನನಗೆ ತಿಳಿಸತಕ್ಕದ್ದು ನನಗೆ ಯಾರು ಮುಲಾಜು ಇಲ್ಲ ಇದು ದೇವರ ಸೇವೆ. ದೇವರ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರಬೇಕು ಈ ಹಣ ಇದು ನನ್ನ ಸ್ಪಷ್ಟ ಸಂದೇಶ ಎಂದು ತಿಳಿಸಿದರು. ಸುಮಾರು ವರ್ಷಗಳಿಂದ ಹೈಕೋರ್ಟಿನಲ್ಲಿ ನಡೆದ ವಿಠಲ ದೇವಸ್ಥಾನದ ಟ್ರಸ್ಟ್ ನ ಅವ್ಯವಾರಗಳ ವಿರುದ್ಧ ಶ್ರೀ ಹನುಮಂತ್ ಕೊಟಬಾಗಿ ಶ್ರೀ ಗುರುರಾಜ ಕುಲಕರ್ಣಿ ಹಾಗೂ ಶ್ರೀರಂಗ ಇನಾಮದಾರ್ ಹೈಕೋರ್ಟ್ ಮೆಟಿಲೇರಿದ್ದರು. ಹೈಕೋರ್ಟು ಸ್ವಚ್ಛ ಆಡಳಿತ ಮಂಡಳಿ ಬರುವವರೆಗೆ ಆಡಳಿತ ಅಧಿಕಾರಿಗಳನ್ನು ನೇಮಿಸಿದ್ದಕ್ಕೆ ಸಾರ್ವಜನಿಕರಿಗೆ ಸಂತೋಷವಾಗಿದೆ. ದೇವಸ್ಥಾನದಲ್ಲಿ ಪರಿಶುದ್ಧವಾಗಿರಬೇಕು ದೇವಸ್ಥಾನದಿಂದ ನಾವು ಏನನ್ನು ತೆಗೆದುಕೊಂಡು ಹೋಗಬಾರದು, ದೇವಸ್ಥಾನಕ್ಕೆ ನಮ್ಮ ದನ್ನ ದಾನವಾಗಿ ಕೊಡಬೇಕು ಎಂದು ಹೇಳಿದರು ನಮ್ಮ ಜಿಲ್ಲಾಧಿಕಾರಿಗಳು ನನಗೆ ಈ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ ಪ್ರಾಮಾಣಿಕವಾಗಿ ನಿಮ್ಮೆಲ್ಲರ ಸಾರ್ವಜನಿಕರ ಸಹಕಾರದಿಂದ ಪ್ರಾಮಾಣಿಕವಾಗಿ ದೇವರ ಸೇವೆ ಮಾಡುತ್ತೇನೆಂದು ಹೇಳಿದರು ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಬ್ರಾಹ್ಮಣ ಹಿರಿಯರಾದ ಹಣಮಂತ ಕೊಟಬಾಗಿಯವರು ಹಾಗೂ ಅಧಿಕಾರ ಕೊಟ್ಟ ಶ್ರೀ ನರಸಿಂಹ ನಾಯಕ ಅವರು ಅನೇಕ ಭಕ್ತರು ಹಾಜರಿದ್ದರು.
