Thursday, November 19, 2026
HomeBelagaviಆಟೋ ಚಾಲಕನ ಹೆಂಡತಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ

ಆಟೋ ಚಾಲಕನ ಹೆಂಡತಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ

ಬೆಳಗಾವಿ
ಆಟೋ ಚಾಲಕನ ಹೆಂಡತಿಗೆ ಮೊಬೈಲ್ ನಲ್ಲಿ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ 20 ರಿಂದ 25 ಜನ ಯುವಕರ ತಂಡ ಜಂಬೆ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ‌ ಘಟನೆ ಇಲ್ಲಿನ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಆಟೋ ಚಾಲಕ ವಾಸೀಮ್ ಬೇಪಾರಿಗೆ ಗಂಭೀರವಾಗಿ ಗಾಯವಾಗಿದ್ದು, ಜಿಲ್ಲಾಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತನ್ನ ಹೆಂಡತಿಗೆ ಇಲ್ಲಿನ‌ ವೀರಭದ್ರೇಶ್ವರ ನಗರದ ವ್ಯಕ್ತಿಯೋರ್ವ ವಾಟ್ಸಪ್ ‌ಮೆಸೇಜ್ ಮಾಡಿದ್ದಾನೆ. ಆಟೋ ಚಾಲಕ ವಾಸೀಮ್ ಕಳೆದ ಒಂದು ವಾರದ ಹಿಂದೆಯೇ ಯಾಕೆ ಮೆಸೇಜ್ ಮಾಡುತ್ತಿದ್ದಿಯಾ ಎಂದು ಪ್ರಶ್ನೆ ಮಾಡಿದ್ದ ಅದೇ ವೈಮನಸ್ಸನ್ನು ಇಟ್ಟುಕೊಂಡು ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಹೋಟೆಲ್ ಒಂದರಲ್ಲಿ ಚಹಾ ಕುಡಿಯಲು ಕುಳಿತ್ತಿದ್ದ ವಾಸೀಮ್ ಗೆ ಕರೆ ಮಾಡಿ ಮಾತನಾಡಬೇಕಿದೆ ಬಾ ಎಂದು ಹೇಳಿ 20 ರಿಂದ 25 ಜನರ ತಂಡದಿಂದ ಜಂಬೆ ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳಿಬ್ಬರು ಮಾರ್ಕೆಟ್ ಪೊಲೀಸ್ ಠಾಣೆಗೆ ಹೋಗಿ ಕುಳಿತಿದ್ದಾರೆ ಎಂದು ಹಲ್ಲೆಗೊಳಗಾದ ಆಟೋ ಚಾಲಕ ಸಹೋದರ ಸಲೀಂ‌ ಬೇಪಾರಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Total Views 370
RELATED ARTICLES

Most Popular

Recent Comments

KNN City News
Home
E-Paper