
ಬೆಳಗಾವಿ
ಮಳೆಗಾಲ ಆರಂಭವಾಗುವ ಮುನ್ನ ಒಳಚರಂಡಿ ಹಾಗೂ ನಗರದಲ್ಲಿನ ನಾಲಾಗಳನ್ನು ಶುಚಿಗೊಳಿಸಿ ಆರಂಭಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಮೇಯರ್ ಮಂಗೇಶ್ ಪವಾರ್ ಸೂಚನೆ ನೀಡಿದರು.
ಮೇಯರ್ ಮಂಗೇಶ್ ಪವಾರ್ ಹೇಳಿದರು.
ಬುಧವಾರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಮಳೆಗಾಲದ ಸಮಸ್ಯೆಯ ಬಗೆಹರಿಸುವ ಸಲುವಾಗಿ ಕರೆಯಲಾದ ಪಕ್ಷಾತೀತ ತುರ್ತು ಸಭೆಯಲ್ಲಿ ಮಾತನಾಡಿದರು. ಮಳೆಗಾಲ ಆರಂಭವಾಗುವ ಮುನ್ನ ಪಾಲಿಕೆ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಿ ಎಲ್ಲಿ ಸಮಸ್ಯೆ ಇದೆಯೋ ಅದನ್ನು ಪೂರ್ಣಗೊಳಿಸಬೇಕು ಎಂದರು.
ಪಾಲಿಕೆ ಕಾಂಗ್ರೆಸ್ ಸದಸ್ಯ ರಿಯಾಜ್ ಕಿಲ್ಲೇದಾರ ಮಾತನಾಡಿ, ನನ್ನ ವಾರ್ಡ್ ನಲ್ಲಿ ಸುಮಾರು 150 ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುತ್ತವೆ. ಎಂಜನೀಯರ್ ಅವರಿಗೆ ಸಮಸ್ಯೆಯ ಬಗ್ಗೆ ಅಧಿಕಾರ ಇಲ್ಲ ಎಂದು ಹೇಳುತ್ತಾರೆ. ಈ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ತಿಳಿಸಿದರು.
ಬಿಜೆಪಿ ಸದಸ್ಯ ವೀಣಾ ವಿಜಾಪುರೆ ಮಾತನಾಡಿ, ಗಣೇಶ ನಗರದಲ್ಲಿ ಒಳಚರಂಡಿ ಕಾಮಗಾರಿಗೆ ಅನುಮೋದನೆ ನೀಡಿ ಎರಡೂ ವರ್ಷ ಕಳೆದರೂ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂದು ದೂರಿದರು.
ಬಿಜೆಪಿ ಸದಸ್ಯ ಶ್ರೇಯಸ್ಸ ನೌಕಾಡಿ ಮಾತನಾಡಿ, ಸಾಯಿ ಹಾಲ್ ಬಳಿ ನಾಲಾ ಇತ್ತು. ಈಗ ಅದನ್ನು ಅತಿಕ್ರಮಣ ಮಾಡಿಕೊಂಡು ನಾಲಾ ಮಾಯವಾಗಿದೆ. ಇದರಿಂದ ಮಳೆಯ ನೀರು ಮನೆಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದರ ಸರ್ವೆ ಕಾರ್ಯ ಮಾಡಿ ನಾಲೆಯನ್ನು ಶುಚಿಗೊಳಿಸಬೇಕು ಎಂದು ಹೇಳಿದರು.
ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮಾತನಾಡಿ, ಆಶ್ರಯ ಕಾಲೋನಿಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ, ಜನರು ರಾತ್ರಿ ವೇಳೆ ಹೊರಗಡೆ ಹೊಗುತ್ತಾರೆ. ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಕೊಡಬೇಕೆಂದು ಸಭೆಗೆ ತಿಳಿಸಿದರು.
ಆಶ್ರಯ ಕಾಲೋನಿಯ ಜನರು ಗುಡ್ಡದಲ್ಲಿ ಶೌಚಾಲಯಕ್ಕೆ ತೆರಳುತ್ತಿದ್ದಾರೆ. ಇಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಇದಕ್ಕೆ ಶಾಶ್ವತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದರು.
ಉಪಮೇಯರ್ ವಾಣಿ ಜೋಶಿ, ಪಾಲಿಕೆ ವಿಪಕ್ಷ ನಾಯಕ ಮುಜಮಿಲ್ಲ ಡೋಣಿ, ಪಾಲಿಕೆ ಆಯುಕ್ತೆ ಶುಭ, ಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
