Monday, November 23, 2026
HomeBelagaviಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ: ಐವರ ಬಂಧನ: ಬೊರಸೆ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ: ಐವರ ಬಂಧನ: ಬೊರಸೆ

ಬೆಳಗಾವಿ
ಅಪ್ರಾಪ್ತ ಬಾಲಕಿಯ ಗೆಳೆತ ಮಾಡಿಕೊಂಡು ಆರು ಜನ ಆರೋಪಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ  ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂತ್ರಸ್ತೆ ಹಾಗೂ ಆರೋಪಿಗಳು ಮೂಲತಹ ಬೆಳಗಾವಿಯಲ್ಲಿ ಜಿಲ್ಲೆಯವರಿದ್ದಾರೆ. ಅಪ್ರಾಪ್ತೆಯ ಸ್ನೇಹ ಮಾಡಿಕೊಂಡಿದ್ದ ಓರ್ವ ಆರೋಪಿ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು‌ ಹೋಗಿ 6 ಜನ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾರಕ್ಕೆ ಒಳಗಾದ 15ವರ್ಷದ ಮೈನರ್ ಬಾಲಕಿ ಇದ್ದಾರೆ. ಪ್ರಕರಣ ಸಂಬಂಧ ಆರು ಜನರ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದರು.
ಅತ್ಯಾಚಾರ ಘಟನೆಯನ್ನ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ರೆಕಾರ್ಡ್ ಬ್ಲ್ಯಾಕ್ ಮೇಲೆ ಮಾಡಿ ಜನವರಿಯಲ್ಲಿ ಮತ್ತೆ ಮೂರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 5ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವನ ಬಂಧನಕ್ಕೆ ಶೋಧ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದರು.
ಐವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಮೈನರ್ ಇದ್ದಾರೆ. ಎ1, ಎ2 ಪ್ರಮುಖ ಆರೋಪಿಗಳಿಂದ ಕೃತ್ಯ ಆಗಿದೆ. ಬೇರೆ ಬೇರೆ ಕಡೆ ಅತ್ಯಾಚಾರ ಮಾಡಲಾಗಿದೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ ಎಂದರು.
ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಸುಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ.ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಮ್ಮ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ್ದರು. ಈ ಕೇಸ್‌ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಮೇ 26 ರಂದು ಸಿಐಡಿಗೆ ವರ್ಗಾವಣೆ ಮಾಡುವಂತೆ ಆದೇಶ ಆಗಿದೆ. ಸಿಐಡಿ ತನಿಖಾ ತಂಡಕ್ಕೆ ನಾವು ಎಲ್ಲಾ ರೀತಿಯಿಂದಲೂ ಸಹಕಾರ ಕೊಡುತ್ತೇವೆ. ಇಂದಿನಿಂದ ಸಿಐಡಿ ತಂಡ ತನಿಖೆ ಆರಂಭಿಸಲಿದೆ ಎಂದರು.

Total Views 182
RELATED ARTICLES

Most Popular

Recent Comments

KNN City News
Home
E-Paper