
ಬೆಳಗಾವಿ
ಮೈಸೂರು ಅರಮನೆ ಜಪ್ಪದಕಟ್ಟೆ ಮಠದ ಶ್ರೀ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಉಜ್ಜಯಿನಿ ಸದ್ಧರ್ಮ ಪೀಠದ ವತಿಯಿಂದ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಮೇ. ತಿಂಗಳ ಮರುಳಸಿದ್ಧ ಜಾತ್ರಾ ಮಹೋತ್ಸವದಲ್ಲಿ ಸದ್ಧರ್ಮ ಶಿರೋಮಣಿ ಪ್ರಶಸ್ತಿ ನೀಡಿ ಆಶೀರ್ವದಿಸಿದ್ದರು.
ಸದ್ಧರ್ಮ ಶಿರೋಮಣಿ ಪ್ರಶಸ್ತಿ ಪಡೆದ ಮೈಸೂರು ಶ್ರೀಗಳಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಮೈಸೂರು ಜಪ್ಪದಕಟ್ಟೆ ಮಠ ಪುರಾತನ ಮಠ. ಮೈಸೂರು ಅರಮನೆಯ ಗುರುಮಠವಾಗಿ ಮೆರೆದ ಶ್ರೀಮಠದ ಅಧಿಪತಿಗಳು ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಿದ್ವಾಂಸರು ಮತ್ತು ಸಾಕಷ್ಟು ಸಾಧಕರಿಗೆ ಮಾರ್ಗದರ್ಶನ ಮಾಡಿದವರು. ನಾವು ಕೂಡ ಮೈಸೂರು ಜಪ್ಪದಕಟ್ಟೆ ಮಠದಲ್ಲಿಯೇ ಇದ್ದು ಅಧ್ಯಯನ ಮಾಡಿದ್ದೇವೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಮದಾಪೂರ ಚರಮೂರ್ತಿಶ್ವರ ಮಠದ ಡಾ. ಸಿದ್ಧಲಿಂಗ ದೇವರು ಮಾತನಾಡಿ, ಮೈಸೂರು ಮಠ ಎಂದರೆ ಅದು ಇತಿಹಾದ ಪ್ರಸಿದ್ಧವಾದ ಮಠ. ಈಗಲೂ ಕೂಡ ಇತಿಹಾಸವಿದೆ. 1558ರಲ್ಲಿ ಅಲ್ಲಿಯ ಪೂಜ್ಯರು ಕಾರ್ಯವನ್ನು ಮಾಡಿರುವುದು ಇತಿಹಾಸ ಪ್ರಸಿದ್ಧವಾಗಿದೆ ಎಂದರು.
ಮೈಸೂರು ಜಪ್ಪದಕಟ್ಟೆ ಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಅರಮನೆ ಜಪ್ಪದಕಟ್ಟೆ ಮಠದ ಕಾರ್ಯಕ್ಕೆ ಉಜ್ಜಯಿನಿ ಪೀಠದಿಂದ ಸದ್ಧರ್ಮ ಶಿರೋಮಣಿ ಪ್ರಶಸ್ತಿ ಲಭಿಸಿರುವುದು ನಮಗೆ ಅತೀವ ಸಂತೋಷ ತಂದಿದೆ. ಜೂ.21 ರಂದು ಮೈಸೂರು ಜಪ್ಪದಕಟ್ಟೆ ಮಠದಲ್ಲಿ ಅಧ್ಯಯನ ಮಾಡಿರುವ ಹರಗುರು, ಶಿವಾಚಾರ್ಯರ, ನಿರಂಜನಮೂರ್ತಿಗಳ ಮತ್ತು ಪುರೋಹಿತರ ಹಾಗೂ ಅನೇಕ ಸಾಧಕರ ಸಮಾವೇಶ ಏರ್ಪಡಿಸಿದ್ದೇವೆ ಎಂದರು.
ಗುಡುಗುಂಟಾ ಅಮರೇಶ್ವರ ಪ್ರಧಾನ ಅರ್ಚಕರಾದ ಗಂಗಾಧರ ಶಾಸ್ತ್ರೀ, ಬ್ಯಾಳಿಮಠ, ತುರಮುರಿಯ ಮಹಾಂತ ಶಾಸ್ತ್ರೀಗಳು ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
