Monday, November 23, 2026
HomeBelagaviಕಪ್ ಗೆದ್ದ RCB ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಕಪ್ ಗೆದ್ದ RCB ಮುಗಿಲು ಮುಟ್ಟಿದ ಸಂಭ್ರಮಾಚರಣೆ

ಬೆಳಗಾವಿ
ಹದಿನೇಳು ವರ್ಷಗಳ ಇತಿಹಾಸ, ಮೂರು ಬಾರಿ ನಿರಾಸೆ, ಅಸಂಖ್ಯಾತ ಅಭಿಮಾನಿಗಳ ಕನಸು ಕೊನೆಗೂ‌ ನನಸಾಗಿದೆ. ಐಪಿಎಲ್‌ನ 2025ರ ಚಾಂಪಿಯನ್ ಪಟ್ಟವನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮುಡಿಗೇರಿಸಿಕೊಂಡಿದೆ.‌
ಅಹಮದಾಬಾದ್‌‌ನ ನರೇಂದ್ರ ಮೋದಿ ಸ್ಟೇಡಿಯಂ‌ನಲ್ಲಿ ನಡೆದ ಪಂದ್ಯದದಲ್ಲಿ ಪಂಜಾಬ್‌ನ ವಿರುದ್ಧ ಆರ್‌ಸಿಬಿ ಅರ್ಹ ಗೆಲುವು ಸಂಪಾದಿಸಿದೆ. ನೆಚ್ಚಿನ‌ ತಂಡದ ಗೆಲುವಿಗಾಗಿ ಕಾದು ಕುಳಿತಿದ್ದ ಬೆಳಗಾವಿ ಅಭಿಮಾನಿಗಳ ಸಂತಸ ನೂರ್ಮಡಿಯಾಗಿದ್ದು, ಗಲ್ಲಿ ಗಲ್ಲಿಯಲ್ಲಿಯೂ ಸಂಭ್ರಮ ಮನೆ ಮಾಡಿದೆ.
ಬೆಳಗಾವಿ ಚನ್ನಮ್ಮ ವೃತ್ತ ಸೇರಿದಂತೆ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರ್‌ಸಿಬಿಯ ಗೆಲುವು ಖಚಿತವಾಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಪಂದ್ಯದ ಬಳಿಕ “ಈ ಸಲ ಕಪ್ ನಮ್ದೆ” ಅಲ್ಲ “ಈ ಸಲ ಕಪ್ ನಮ್ದು” ಎಂದು ವಿರಾಟ್ ಉಚ್ಚರಿಸುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಮೂಲಕ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು.
ಆರ್ ಸಿಬಿ ತಂಡವು ಫೈನಲ್ನಲ್ಲಿ ಗೆಲ್ಲಬೇಕೆಂದು ಅಭಿಮಾನಿಗಳು ಪ್ರಾರ್ಥಿಸಿದ ದೇವರುಗಳೇ ಇರಲಿಲ್ಲ. ರಾಜ್ಯ ಸೇರಿದಂತೆ ದೇಶದಲ್ಲಿರುವ ಕೋಟ್ಯಾಂತರ ಅಭಿಮಾನಿಗಳು ಹಾರೈಸಿದ್ದರು. ಆರ್ಸಿಬಿ ಕಪ್ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ದೀಪಾವಳಿ ಹಬ್ಬ ಬಂದಿತೇನು ಎಂಬಂತೆ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದರು.

Total Views 68
RELATED ARTICLES

Most Popular

Recent Comments

KNN City News
Home
E-Paper