Monday, November 23, 2026
HomeBelagaviಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ

ಬೆಳಗಾವಿ
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಗುರುವ ರೈತನೋರ್ವನಿಗೆ ಹಾವು ಕಚ್ವಿದ ಪರಿಣಾಮ ಕಚ್ಚಿದ ಹಾವನ್ನು ಹಿಡಿದುಕೊಂಡು ಬಂದು ಜಿಲ್ಲಾಸ್ಪತ್ರೆಗೆ ಬಂದ ಘಟ‌ನೆ ಮಂಗಳವಾರ ನಡೆದಿದೆ.
ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪನಿಗೆ ರುಸೇಲ್ಸ್ ಎಂಬ ವಿಷಕಾರಿ ಹಾವು ಕಡಿದ ಹಿನ್ನೆಲೆಯಲ್ಲಿ ಹಾವಿನ ಸಮೇತ ಬಿಮ್ಸ್ ಆಸ್ಪತ್ರೆಗೆ ಆಗಮಿಸಿ‌ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಲ್ಲಪ್ಪ, ಜಮೀನಿನಲ್ಲಿ‌ ಕೆಲಸ ಮಾಡುವಾಗ ಕೈ‌‌ ಬೆರಳಿಗೆ ಹಾವು ಕಚ್ಚಿದ ಹಿನ್ನೆಲೆಯಲ್ಲಿ ಅದನ್ನು ಡಬ್ಬದಲ್ಲಿ ಹಾಕಿಕೊಂಡು ‌ಆಸ್ಪತ್ರೆಗೆ ಆಗಮಿಸಿ‌‌ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದರು.

Total Views 32
RELATED ARTICLES

Most Popular

Recent Comments

KNN City News
Home
E-Paper