Monday, November 23, 2026
HomeBelagaviವಾಯು ಮುಕ್ತ ಪರಿಸರ ನಿರ್ಮಾಣಕ್ಕೆ ‌ಮೇಯರ್ ಮಂಗೇಶ್ ಕರೆ

ವಾಯು ಮುಕ್ತ ಪರಿಸರ ನಿರ್ಮಾಣಕ್ಕೆ ‌ಮೇಯರ್ ಮಂಗೇಶ್ ಕರೆ

ಬೆಳಗಾವಿ
ಪ್ಲಾಸ್ಟಿಕ್ ಮುಕ್ತ ಹಾಗೂ ವಾಯು ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾದಾಗ ಮಾತ್ರ ಈ ವಿಶ್ವ ಪರಿಸರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ಮೇಯರ್ ಮಂಗೇಶ್ ಪವಾರ್ ಹೇಳಿದರು.
ಇಲ್ಲಿನ ಖಾಸಬಾಗ ಸರಕಾರಿ ಶಾಲೆಯಲ್ಲಿ ‌ಮುರುಗೋಡ ಪೆಂಡಾಲ್ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಫಕ್ಕೀರಪ್ಪ ಮುರಗೋಡ ಅವರು ಸಾಮಾಜಿಕ ಕಾರ್ಯದ ಜೊತೆಗೆ ಪರಿಸರ ಪ್ರೇಮದ ಜಾಗೃತಿ ಕೆಲಸ‌ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
ಪ್ರತಿಯೊಬ್ಬ ನಾಗರಿಕರು ಮನೆಗೊಂದು ಗಿಡ ನೆಟ್ಟು ಅದನ್ನು ಪೋಷಿಸಿ, ಅದನ್ನು ಬೆಳೆಸಿದಾಗ ಮಾತ್ರ ನಮ್ಮ ಪರಿಸರ ಸ್ವಚ್ಛವಾಗಿ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಕೊಡಲಿಕ್ಕೆ ಸಾಧ್ಯವಾಗುವುದು ಎಂದರು.
ಪಾಲಿಕೆ ವಿಪಕ್ಷ ನಾಯಕ ಮುಜಮ್ಮುಲ್ ಡೋಣಿ ಮಾತನಾಡಿ, ಪರಿಸರವನ್ನು ಪೋಷಿಸುವ ಕೆಲಸ ನಾವು ನೀವೆಲ್ಲರೂ ಮಾಡಿದಾಗ ಮಾತ್ರ ನೈಸರ್ಗಿಕ ಪರಿಸರ ಸಿಗಲಿಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಮಕ್ಕಳಿಗೂ ಕೂಡ ಇದರ ಜಾಗೃತಿಗಾಗಿ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಕುರಿತು ಪ್ರಬಂಧ ಬರೆಯುವುದು ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಲ್ಲೂ ಕೂಡ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಅಂದಾಮ ಮಾತ್ರ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಉಪಮೇಯರ್ ವಾಣಿ ಜೋಶಿ, ಪಾಲಿಕೆ ಸದಸ್ಯೆ ಪ್ರೀತಿ ಕಾಮ್ಕರ್ ಫಕೀರಪ್ಪ ಮುರುಗೋಡ, ವಿನಾಯಕ ಕಾಮ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 17
RELATED ARTICLES

Most Popular

Recent Comments

KNN City News
Home
E-Paper