
ಬೆಳಗಾವಿ
ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪಿ ರಾಜು ಕುಡತರ್ಕರ್ ಟಾರ್ಚರ್ ಗೆ ಇಡೀ ಕುಟುಂಬ ಬಲಿಯಾದ ಘಟನೆ ಬುಧವಾರ ನಡೆದಿದೆ.
ಚಿನ್ನ ತೆಗೆದುಕೊಂಡು ಹೋಗಿ ಮೋಸ ಮಾಡಿದ ರಾಜು, ಜನರಿಂದ ತಂದಿದ್ದ ಚಿನ್ನವನ್ನು ರಾಜು ನಂಬಿ ಕೆಲಸ ಮಾಡಲು ನೀಡಿದ್ದ ಸಂತೋಷ್ ಚಿನ್ನ ವಿನ್ಯಾಸಗೊಳಿಸಲು ನೀಡಿದ್ದ ಮೃತ ಸಂತೋಷ್ ಅರ್ಧ ಕೆಜಿ ಚಿನ್ನ ತೆಗೆದುಕೊಂಡು ಹೋಗಿ ಮೋಸ ಹೋಗಿದ್ದ ಎಂದು ಡೆತ್ ನೋಟ್ ಬರೆದಿದ್ದಾನೆ.
ಇತ್ತ ಚಿನ್ನ ಕೊಟ್ಟವರು ಸಂತೋಷ್ ಮನೆಗೆ ಬಂದು ವಾಪಾಸ್ ನೀಡುವಂತೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಎರಡು ಕಡೆಯ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಮತ್ತು ತಂಗಿಯರಿಗೆ ಎರಡು ಗಂಟೆಗಳ ಕಾಲ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಕನ್ವೆನ್ಸ್ ಮಾಡಲಾಗಿದೆ. ಸಾವೇ ತಮಗೆ ಕೊನೆ ದಾರಿ ಅನ್ನೋದನ್ನ ಕುಟುಂಬಸ್ಥರಿಗೆ ಮನವರಿಕೆ.ಬಳಿಕ ತನ್ನೊಟ್ಟಿಗೆ ತಂದಿದ್ದ ವಿಷವನ್ನ ಕುಟುಂಬಸ್ಥರಿಗೆ ನೀಡಿ ಬಳಿಕ ತಾನೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷ ಕುಡಿಯುವುದಕ್ಕೆ ವಿರೋಧ ಮಾಡಿದ್ದ ಸುನಂದಾ.ಆಕೆಯನ್ನ ಬಿಟ್ಟು ಮೂರು ಜನ ಮೊದಲು ವಿಷ ಸೇವನೆ ಮಾಡಿದ್ದಾರೆ. ಎಲ್ಲರೂ ಹೋದ ಮೇಲೆ ತಾನೇನು ಮಾಡೋದು ಅಂತಾ ಕೊನೆಯಲಿ ವಿಷ ಸೇವಿಸಿ ಬದುಕುಳಿದಿರುವ ಸುನಂದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
