
ಖಾನಾಪುರ
ರಾಷ್ಟ್ರೀಯ ಹೆದ್ದಾರಿಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಬೈಕ್ ನಿಂದ ಆಯ ತಪ್ಪಿ ಬಿದ್ದು ಸೈನಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಖಾನಾಪುರ ತಾಲೂಕಿನ ಇದ್ದಿಲುಹೊಂಡ ಗ್ರಾಮದ ಬಳಿ ನಡೆದಿದೆ.

ರಜೆಗೆ ಎಂದು ಬೆಳಗಾವಿಗೆ ಬಂದಿದ್ದ ಸೈನಿಕ ಸೂರಬ್ ದ್ರೌಪದಕರ್ (28) ಮೃತಪಟ್ಟಿದ್ದಾನೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಸಿಬ್ಬಂದಿಗಳು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
