Monday, November 23, 2026
HomeBelagaviಪ್ರಜ್ವಲ್ ರೇವಣ್ಣ ಕಟುಂಬ ಕಾನೂನು ಹೋರಾಟ ಮಾಡಬಹುದು, ಅದು ಅವರಿಗೆ ಬಿಟ್ಟ ವಿಷಯ: ಶೆಟ್ಟರ್

ಪ್ರಜ್ವಲ್ ರೇವಣ್ಣ ಕಟುಂಬ ಕಾನೂನು ಹೋರಾಟ ಮಾಡಬಹುದು, ಅದು ಅವರಿಗೆ ಬಿಟ್ಟ ವಿಷಯ: ಶೆಟ್ಟರ್

ಬೆಳಗಾವಿ
ಮಾಜಿ ಸಂಸದ ಪ್ರಜ್ವಲ ರೇವಣ ಶಿಕ್ಷೆ ಪ್ರಕಟ ಕುರಿತು ಅವರ ಕುಟುಂಬದವರು ಕಾನೂನು ಹೋರಾಟ ಮಾಡಬಹುದು, ಅದು ಅವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದೆ ಮಾತನಾಡಿದರು. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕು. ಅದು ಆಗುತ್ತದೆ. ಅದನ್ನು ಪ್ರಶ್ನಿಸಲು ಬರುವುದಿಲ್ಲ ಎಂದರು.
ಇನ್ನೂ ಕಾಂಗ್ರೆಸ್ ಶಾಸಕ ರಾಜು ಕಾಗೆ ಭೇಟಿ ವಿಚಾರಕ್ಕೆ ಉತ್ತರಿಸಿದ ಅವರು, ನಿನ್ನೆ ಡಾ. ಪ್ರಭಾಕರ ಕೋರೆ ಅವರ ಜನ್ಮ ದಿನ ಇತ್ತು ಹಾಗಾಗಿ ಎಲ್ಲ ನಾಯಕರು ಬಂದಿದ್ದರು. ಆ ನಿಟ್ಟಿನಲ್ಲಿ ರಾಜು ಕಾಗೆ ಅವರನ್ನು ಭೇಟಿಯಾಗಿದ್ದೇನೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಸರಕಾರದ ವಿರುದ್ಧ ಅಸಮಾಧಾನ ಇರುವ ಕಾಗೆ ಅವರದ್ದು ಅದು ಅವರ ವೈಯಕ್ತಿಕ ಎಂದರು.

Total Views 23
RELATED ARTICLES

Most Popular

Recent Comments

KNN City News
Home
E-Paper