
ಬೆಳಗಾವಿ
ಯುವತಿ ವಿಚಾರಕ್ಕೆ ಮುತ್ಯಾನಟ್ಟಿ ಯುವಕರ ಗುಂಪೊಂದು ಯುವಕನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಗುರವಾರ ಶಿವಾಜಿ ನಗರದ ಮೂರನೇ ಕ್ರಾಸ್ ನಲ್ಲಿ ನಡೆದಿದೆ.
ಶಿವಾಜಿ ನಗರದ ಕುನಾಲ್ ಲೋಹಾರ್ (20) ಹಲ್ಲೆಗೊಳಗಾದ ಯವಕ. ಉದ್ಯಮಬಾಗದಲ್ಲಿ ಕೆಲಸ ಮಾಡುತ್ತಿದ್ದ ಕುನಾಲ್ ಕೆಲಸಕ್ಕೆ ಮುಗಿಸಿಕೊಂಡು ಮನೆಗೆ ಊಟಕ್ಕೆ ಬಂದ ವೇಳೆ ಮುತ್ಯಾನಟ್ಟಿಯ 10 ರಿಂದ 15 ಜನ ಯುವಕರ ಗುಂಪೊಂದು ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಕುನಾಲ್ ತಲೆ ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯವಾಗಿದೆ. ಸ್ಥಳದಲ್ಲಿ ಜನರು ಜಮಾವಣೆಗೊಳ್ಳುವುದನ್ನು ಕಂಡ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕುನಾಲ್ ನನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
