Monday, November 23, 2026
HomeBelagaviವಂದೇ ಭಾರತ್ ರೈಲು ಬರುತ್ತಿರುವುದು ಯಾರಿಂದ ಗೊತ್ತಾ..?

ವಂದೇ ಭಾರತ್ ರೈಲು ಬರುತ್ತಿರುವುದು ಯಾರಿಂದ ಗೊತ್ತಾ..?

ಬೆಳಗಾವಿ
ಬೆಳಗಾವಿ ‌ಜಿಲ್ಲೆಗೆ ಬರಬೇಕಾದ ಮಹತ್ವಾಕಾಂಕ್ಷಿ ಉಡಾನ್ ಯೋಜನೆ, ಹೈಕೋರ್ಟ್ ನ್ಯಾಯಪೀಠ, ಐಐಟಿ ಸೇರಿದಂತೆ ರೈಲ್ವೆ ಯೋಜನೆಯನ್ನು ಹುಬ್ಬಳ್ಳಿ – ಧಾರವಾಡಕ್ಕೆ ಕೊಂಡೊಯ್ದು ಶ್ರೇಯ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸಲ್ಲುತ್ತದೆ.
ಹೌದು. ಈಗ ಬೆಳಗಾವಿಗೆ ಬರುತ್ತಿರುವ ವಂದೇ ಭಾರತ್ ರೈಲಿನ ಕ್ರೆಡಿಟ್ ಪಡೆಯುತ್ತಿರುವ ಸಂಸದ ಜಗದೀಶ್ ‌ಶೆಟ್ಟರ್ ಕೊಡುಗೆ ಶೂನ್ಯವಾಗಿದೆ. ಆದರೂ ನನ್ನ ಪ್ರಯತ್ನದಿಂದ ವಂದೇ ಭಾರತ್ ರೈಲು ಬರುತ್ತಿದೆ ಎಂದು ಬೆಳಗಾವಿ ಜನರಿಗೆ ಸತ್ಯ ಮರೆ ಮಾಚುತ್ತಿದ್ದಾರೆ ಎನ್ನುವ ಆರೋಪ ಬಿಜೆಪಿಯಲ್ಲಿಯೇ ಕೇಳಿ ಬರುತ್ತಿದೆ.
ವಂದೇ ಭಾರತ್ ರೈಲು ಮೊದಲಿನಿಂದಲೂ ಕೆಲವು ಬೆಳಗಾವಿ ನಾಗರಿಕ ಸಂಘಟನೆಗಳು ಮತ್ತು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ವಂದೇ ಭಾರತ್ ರೈಲು ಬೆಳಗಾವಿಗೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಮಂಗಳಾ ಅಂಗಡಿ ಅವರು ಬೆಳಗಾವಿ ಸಂಸದೆಯಾಗಿನಿಂದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ವಂದೇ ಭಾರತ್ ರೈಲು ಬೆಳಗಾವಿಗೆ ಬರಬೇಕೆಂದು ಬೆಳಗಾವಿ ಸಂಘಟನೆಗಳು ದೆಹಲಿಗೆ ಇಲ್ಲಿನ ನಾಗರಿಕರು ಹೋದಾಗ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿ ಬೆಳಗಾವಿ ಜನರ ಪರವಾಗಿ ವಂದೇ ಭಾರತ್ ರೈಲು ಬೆಳಗಾವಿಗೆ ಬರಲು ಹೋರಾಡಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಸಂಸದರಾಗುವ ಮುನ್ನವೇ ವಂದೇ ಭಾರತ್ ರೈಲು ಪ್ರಾಯೋಗಿಕವಾಗಿ ಸಂಚಾರ ನಡೆಸುವಂತೆ ಮಾಡಿದ್ದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅದು ತಾಂತ್ರಿಕ ದೋಷದಿಂದ ಅದು ಬೆಳಗಾವಿಯವರೆಗೂ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ಪುಣೆಯವರೆಗೂ ವಿಸ್ತರಿಸಿದಾಗ ಅದನ್ನು ಬೆಳಗಾವಿಯವರೆಗೂ ಕೇಳಬೇಡಿ ಬೆಳಗಾವಿ ಪುಣೆ ವಂದೇ ಭಾರತ್ ರೈಲು ಕೊಟ್ಟಿತ್ತು.
ಬಿಜೆಪಿಯಲ್ಲಿ ಕೆಲಸ ಮಾಡುವಕ್ಕಿಂತ ಕ್ರೆಡಿಟ್ ತೆಗೆದುಕೊಳ್ಳುವ ನಾಯಕರು ಹೆಚ್ಚಾಗಿದ್ದಾರೆ. ವಂದೇ ಭಾರತ್ ರೈಲು ಬೆಳಗಾವಿವರೆಗೂ ಬರುವಂತೆ ಮಾಡಿದ್ದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಈಗ ಇದರ ಕ್ರೆಡಿಟ್ ತೆಗೆದುಕೊಳ್ಳಲು ಹೊರಟ್ಟಿದ್ದು ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕೆಲ ಶಾಸಕರು ಸೇರಿಕೊಂಡು ಸಭೆ ಮಾಡಿದರೆ ವಂದೇ ಭಾರತ್ ರೈಲು ಅವರಿಂದ ಆಗುವುದಿಲ್ಲ. ನಿಜವಾಗಲೂ ವಂದೇ ಭಾರತ್ ರೈಲು ಬಂದಿರುವುದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರಿಂದ ಎನ್ನುವುದು ಬೆಳಗಾವಿ ಜನರಿಗೆ ತಿಳಿದಿದೆ. ಆದರೆ ಹೊರಗಿನಿಂದ ಬಂದ ಹುಬ್ಬಳ್ಳಿ ಧಾರವಾಡದ ಶೆಟ್ಟರ್ ಅವರು ಈಗ ವಂದೇ ಭಾರತ್ ರೈಲಿನ ಕ್ರೆಡಿಟ್ ತೆಗೆದುಕೊಂಡು ಬೆಳಗಾವಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪ ಶೆಟ್ಟರ್ ಮೇಲೆ ಇದೆ.
ಈ ಹಿಂದೆಯೂ ಸವದತ್ತಿ ಯಲ್ಲಮ್ಮನ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಹೋಗಿ ಮುಖ ಭಂಗ ಅನುಭವಿಸಿರುವ ಜಗದೀಶ್ ಶೆಟ್ಟರ್ ಅವರು ಈಗ ವಂದೇ ಭಾರತ್ ರೈಲು ನನ್ನಿಂದ ಆಗುತ್ತಿದೆ ಎನ್ನುವುದು ಹಾಸ್ಯಾಸ್ಪದ ಸಂಗತಿ.

Total Views 285
RELATED ARTICLES

Most Popular

Recent Comments

KNN City News
Home
E-Paper