Monday, November 23, 2026
HomeBelagaviಬೆಳಗಾವಿ ಡಿಸಿಗೆ ಅಪಮಾನ ಮಾಡಿದ ಶಾಸಕ ಅಭಯ ವಿರುದ್ಧ ಸಿಡಿದೆದ್ದ ಜನರು

ಬೆಳಗಾವಿ ಡಿಸಿಗೆ ಅಪಮಾನ ಮಾಡಿದ ಶಾಸಕ ಅಭಯ ವಿರುದ್ಧ ಸಿಡಿದೆದ್ದ ಜನರು

ಬೆಳಗಾವಿ
ಇತ್ತೀಚೆಗೆ ಬೆಳಗಾವಿ ಧರ್ಮಸ್ಥಳದ ಅಪಪ್ರಚಾರದ ಕುರಿತು ನಡೆಸಿದ ಹೋರಾಟದಲ್ಲಿ ಬೆಳಗಾವಿ ದಕ್ಷಿಣ ‌ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಮಾತಿನ ಭರದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಅವಮಾನ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಭಯ ಪಾಟೀಲ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ಅಭಯ ಪಾಟೀಲ್ ಅಧಿಕಾರಿಗಳ ಜೊತೆಗೆ ನಡೆದುಕೊಳ್ಳುವ ಸಂಸ್ಕೃತಿ ಮೊದಲಿನಿಂದಲೂ ಸರಿ ಇಲ್ಲ. ತನ್ನ ಮಾತು ಕೇಳದ ಅಧಿಕಾರಿಗಳ ವಿರುದ್ಧ ಜನಸಮ್ಮುಖದಲ್ಲಿಯೇ ಅವರಿಗೆ ಅಪಮಾನ ಮಾಡಿರುವುದು ಇದು ಹೊಸದಲ್ಲ. ಆದರೆ ಒಬ್ಬ ಜನಪ್ರಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಏರು ಧ್ವನಿಯಲ್ಲಿ ಅವಮಾನ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಭಯ ಪಾಟೀಲ್ ವಿರುದ್ಧ ಹರಿಹಾಯುತ್ತಿದ್ದಾರೆ.
ಶಾಸಕ ಅಭಯ ಪಾಟೀಲ್ ತಮ್ಮ ಮಾತು ಕೇಳದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು‌ ಅವಮಾನ ಮಾಡುವುದು, ಅವರಿಗೆ ವರ್ಗಾವಣೆ ಮಾಡಿಸಿಕೊಂಡು‌ ಹೊಗುವಂತೆ ಕಿರುಕುಳ ನೀಡುವುದು ಸಾಮಾನ್ಯವಾಗಿದೆ. ಈ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದೀಪ್ ಪಾಟೀಲ್, ಚೀಫ್ ಇಂಜನಿಯರ್ ಶಿವಪುತ್ರಪ್ಪ ಖನಗಾವಿ, ಪಾಲಿಕೆ ಆಯುಕ್ತ ಜಗದೀಶ್ ಅವರಿಗೂ ಅಪಮಾನ ಮಾಡಿದ್ದರು. ಜನರು ಸಿಡಿದು ನಿಂತ ಮೇಲೆ ಸರಕಾರವೇ ಸಂದೀಪ್ ಪಾಟೀಲ್ ಪರ ನಿಂತಿದ್ದನ್ನು ಗಮನಿಸಿ ಅವರ ವರ್ಗಾವಣೆ ರದ್ದು ಮಾಡಿದ್ದು ಅಭಯ ಪಾಟೀಲ್ ಗೆ ಮುಖ ಭಂಗವಾಗಿತ್ತು.
ಇನ್ನೂ ಗಣೇಶ ಹಬ್ಬದ ಕುರಿತು ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ‌ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಅಪಮಾನ ಮಾಡುವ ಹುನ್ನಾರ ನಡೆಸಿರುವ ಶಾಸಕ ಅಭಯ ಪಾಟೀಲ್ ಸ್ವತಃ ಜಿಲ್ಲಾಧಿಕಾರಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ನೆನಪಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಹೋರಾಟ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲು ಬಂದ ಎಲ್ಲರೂ ಸಮಾಧಾನದಿಂದ‌ ಭಾಷಣ ಮಾಡಿದರು. ಆದರೆ ಶಾಸಕ ಅಭಯ ಪಾಟೀಲ್ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಗುರಿಯಾಗಿಸಿ ಅಪಮಾನ ಮಾಡಿದ್ದು ಜಿಲ್ಲೆಯ ಜನರು ಅಭಯ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗೆ ಸಾಕಷ್ಟು ಕೆಲಸ ಇರುತ್ತದೆ. ಎಲ್ಲ ಕೆಲಸ ಬಿಟ್ಟು ಹೋರಾಟಗಾರ ಮನವಿ ಸ್ವೀಕರಿಸಲು ಬಂದಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಅಪಮಾನ ಮಾಡಿ ಮಾತನಾಡಿದ್ದು ಹೋರಾಟದಲ್ಲಿ ಭಾಗವಹಿಸಿದ್ದವರೇ ಖಂಡಿಸಿದ್ದಾರೆ.

Total Views 891
RELATED ARTICLES

Most Popular

Recent Comments

KNN City News
Home
E-Paper